ಹೈದರಾಬಾದ್: ಕೆಲಸ ಹುಡುಕಿಕೊಂಡು ದಿನಕ್ಕೆ ಅದೆಷ್ಟೋ ಮಂದಿ ಸಿಲಿಕಾನ್ ಸಿಟಿ ಕಡೆಗೆ ಬರುತ್ತಿದ್ದಾರೆ. ಹೀಗೆ ಬರುವ ಉದ್ಯೋಗಾಕಾಂಕ್ಷಿಗಳು ಉಳಿಯಲು ನೆಲೆ ಹುಡುಕುತ್ತಾರೆ. ಎಷ್ಟೋ ದುಡ್ಡು ಕೊಟ್ಟಿಬಿಡೋಣ ಜಾಗ ಸಿಕ್ರೆ ಸಾಕು ಎನ್ನುವ ಮನಸ್ಥಿತಿ ಅವರದ್ದು. 


ಇದನ್ನೇ ಬಂಡವಾಳವಾಗಿಸಿಕೊಳ್ಳುವ ರಿಯಲ್ ಎಸ್ಟೇಟ್ ಡೀಲರ್ಗಳು ಕಮಿಷನ್ ಆಸೆಗೆ ಮೋಸ ಮಾಡುವ ವರದಿಗಳಾಗಿವೆ. ತಾವಿರುವ ಜಾಗ ಎಂಥದ್ದು, ಅವರ ಮನಸ್ಥಿತಿಗಳೇನೋ, ಅಲ್ಲ ತಾವು ಸೇಫಾಗಿದ್ದೀವಾ ಇಷ್ಟೆಲ್ಲ ಯೋಚನೆಗಳ ಮಧ್ಯೆಯೇ ಅನಿವಾರ್ಯವಾಗಿ ಜೀವನ ಮಾಡಬೇಕು.


ಕೋಲಾರ ಮೂಲದ ಉತ್ಸಾಹಿ ಯುವಕರಾದ ಸುಬ್ಬು ಅತ್ತಿಕುಂಟೆ, ಅಂಬರೀಶ್ ಅತ್ತಿಕುಂಟೆ ಹಾಗೂ ರಾಜಸ್ಥಾನ ಮೂಲದ ಮಾಯಾಂಕ್ ಅವರು ಶುರುಮಾಡಿರುವ ಸಿಂಪ್ಲಿ ಗೆಸ್ಟ್ ಹೆಸರಿನ ಸ್ಟಾರ್ಟ್ಅಪ್ (ನವೋದ್ಯಮ) ಇಂಥ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. 


ಒಂದು ಬೆಡ್, ಒಂದು ಮನೆ, ಫ್ಲಾಟ್, ವಿಲಾ ಹೀಗೆ ಹಲವು ಬಗೆಯ ಪ್ರಾಪರ್ಟಿಗಳನ್ನು ಸಿಂಪ್ಲಿ ಗೆಸ್ಟ್ ಪೂರೈಸುತ್ತದೆ. ಉದ್ಯೋಗಕ್ಕಾಗಿ ಬರುವ ಬೇರೆ ರಾಜ್ಯದ ಯುವಕ, ಯುವತಿಯರು ತಮಗೆ ಅನುಕೂಲಕ್ಕೆ ತಕ್ಕಂತೆ ಬಾಡಿಗೆಗೆ ಪಡೆಯಬಹುದಾಗಿದೆ. 


ಟಿವಿ, ಫ್ಯಾನ್, ಸೋಫಾ, ಫ್ರಿಡ್ಜ್, ಕಬೋರ್ಡ್, ಕಿಚನ್ ಸೇರಿದಂತೆ ನಿತ್ಯ ಬೇಕಾಗುವ ಎಲ್ಲ ಸೌಲಭ್ಯಗಳು ಸಿಂಪ್ಲಿ ಗೆಸ್ಟ್ ಪೂರೈಸುವ ಮನೆಗಳಲ್ಲಿರುತ್ತದೆ. ಮನೆ ಕೆಲಸಗಾರರನ್ನೂ ಸಂಸ್ಥೆಯೇ ಪೂರೈಸುತ್ತದೆ. ಬೇಕಿದ್ದರೆ ಅಡುಗೆ ಭಟ್ಟರನ್ನು ಬುಕ್ ಮಾಡಹಬುದು. 


ಮನೆ ಮಾಲಿಕರಿಗಿಲ್ಲ ಪ್ರಶ್ನಿಸುವ ಅವಕಾಶ 

ಮನೆ ಬಾಡಿಗೆ ಕೊಡುವ ಮಾಲೀಕರು ಪ್ರತೀ ವಿಷಯಕ್ಕೂ ಬಾಡಿಗೆದಾರರನ್ನು ಪ್ರಶ್ನಿಸುತ್ತಾರೆ ಎಂಬುದು ಬಹುತೇಕರ ಸಮಸ್ಯೆ. ಆದ್ರೆ, ಸಿಂಪ್ಲಿ ಗೆಸ್ಟ್ ಪ್ರಾಪರ್ಟಿಗಳಲ್ಲಿ ಮನೆ ಮಾಲೀಕರ ಮಧ್ಯಪ್ರವೇಶ ತಡೆಯುವ ಒಂದು ಆಯ್ಕೆ ಲಭ್ಯವಿದೆ. 


ಕೇಟರಿಂಗ್ ಕೂಡ ಲಭ್ಯ 

ಸಿಂಪ್ಲಿ ಗೆಸ್ಟ್ ಸಂಸ್ಥೆಯು ಹಲವು ಕೇಟರಿಂಗ್ ಏಜೆನ್ಸಿಗಳ ಜೊತೆ ಟೈ ಅಪ್ ಮಾಡಿಕೊಂಡಿದ್ದು, ಊಟ ಬೇಕಿದ್ದರೆ ಬುಕ್  ಮಾಡಬಹುದು. 


ಇಲ್ಲಿ ಎಲ್ಲವೂ ಶೇರಿಂಗ್

ನಿಮ್ಮ ಫ್ಲ್ಯಾಟ್ ಮೇಟ್ ಜೊತೆ ನೀವು ಒಂದು ಸಿನಿಮಾಗೆ ಹೋದ್ರೆ, ಅಥವಾ ಎಲ್ಲಾದರೂ ಊಟ ಮಾಡಿದರೆ ಅದನ್ನು ನಿಮ್ಮ ಖಾತೆಯಲ್ಲಿ ಆ್ಯಡ್ ಮಾಡಬೇಕು. ಅದಕ್ಕೆ ಖರ್ಚಾದ ಹಣ ಎಷ್ಟು ಮಂದಿ ಇರುತ್ತಾರೋ ಅಷ್ಟು ಪಾಲಾಗಿ ಬಾಡಿಗೆ ಜೊತೆಯಲ್ಲೇ ಕಟ್ಟಬಹುದು. 


ಐಡಿಯಾ ಬಂದದ್ದು ಹೇಗೆ?

ಬೆಂಗಳೂರಿನಲ್ಲಿ ಮನೆ ಬಾಡಿಗೆದಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಈ ತಂಡವು ಅದಕ್ಕೆ ಅನುಗುಣವಾಗಿ ಎರಡು ಉದ್ಯಮಗಳನ್ನು ಆರಂಭಿಸಿದರು. ಆದರೆ ಅವು ಫಲ ಕೊಡಲಿಲ್ಲ. ಹೇಗೂ ಇದೇ ಉದ್ಯಮದಲ್ಲಿ ತೊಡಗಿಕೊಂಡಿದ್ದರಿಂದ ಸಿಂಪ್ಲಿಗೆಸ್ಟ್ ಸಂಸ್ಥೆ ಆರಂಭಿಸಿದರು.


ಯುವತಿಯರಿಗೆ ಸೇಫ್

ಬೇರೆ ರಾಜ್ಯದ ಯುವತಿಯರು ಬೆಂಗಳೂರಿಗೆ ಬಂದಮೇಲೆ ಮೊದಲ ನೋಡುವುದು ತಮ್ಮ ಸೇಫ್ಟಿ. ಸಿಂಪ್ಲಿಗೆಸ್ಟ್ ಇವರಿಗಾಗೆಂದೇ ಕೆಲವು ಸೇವೆಗಳನ್ನು ನೀಡುತ್ತಿದ್ದು. ಬಳಕೆದಾರ ಹೆಣ್ಣುಮಕ್ಕಳು ಜಾಲತಾಣಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Find out more: