ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಎಚ್. ವಿಶ್ವನಾಥ್ ಅವರನ್ನೇ ಮುಂದುವರೆಸಬೇಕು ಎನ್ನುವುದು ಜೆಡಿಎಸ್ ವರಿಷ್ಠರ ಅಭಿಪ್ರಾಯ. ಆದರೆ ಇದಕ್ಕೆ ಎಚ್. ವಿಶ್ವನಾಥ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮಧು ಬಂಗಾರಪ್ಪ ಅವರ ಹೆಸರು ಇದೀಗ ಕೇಳಿ ಬರುತ್ತಿದೆ.
ಹೌದು, ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದ ಪ್ರಮುಖ ಯುವ ನಾಯಕ. ಅಲ್ಲದೇ ದಧವೇಗೌಡರ ಕುಟುಂಬಕ್ಕೆ ತುಂಬ ಹತ್ತಿರ ಇರುವವರು. ಜೊತೆಗೆ ಪಕ್ಷದ ಯುವಕಾರ್ಯಕರ್ತರನ್ನು ಹುರಿದುಂಬಿಸುವ ಸಾಮರ್ಥ್ಯ ಇರೋರು ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಹೀಗಾಗಿ, ಒಂದು ವೇಳೆ ದೇವೇಗೌಡರ ಮಾತಿಗೂ ಎಚ್. ವಿಶ್ವನಾಥ್ ತಮ್ಮ ರಾಜೀನಾಮೆ ಪಡೆಯಲು ಹಿಂದೇಟು ಹಾಕಿದರೆ, ಆಗ ಮಧು ಬಂಗಾರಪ್ಪ ಅವರೇ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಆಗೋ ಸಾಧ್ಯತೆಗಳು ದಟ್ಟವಾಗಿವೆ.
ಒಂದು ವೇಳೆ ಮಧು ಬಂಗಾರಪ್ಪ ಅವರ ಮೇಲೆ ಈ ಜವಾಬ್ದಾರಿ ಬಿದ್ದರೆ, ಪಕ್ಷವನ್ನು ಮತ್ತೆ ಸಂಘಟಿಸಿ ಅಧಿಕಾರಕ್ಕೆ ತರುವ ಹಾಗೂ ಪಕ್ಷದ ಪುನಶ್ಚೇತನ ಮಾಡುವ ಕೆಲಸ ಅವರಿಂದ ಆಗಬೇಕಿದೆ.