ಸಾಹಿತಿಗಳು ಅದರಲ್ಲೂ ಬುದ್ಧಿಜೀವಿಗಳು ಸತ್ತರೆ ಅವರ ಬಗ್ಗೆ ಕೆಟ್ಟದಾಗಿ ಬರೆಯುವುದು. ಅವರ ನಿಧನಕ್ಕೆ ವಿಕೃತಿ ಮೆರೆಯವುವುದು. ಪಟಾಕಿ ಸಂಭ್ರಮಿಸಿ ಖುಷಿ ಪಡುವುದು ನಡೆದಿದೆ. ಈ ಸಾಲಿಗೆ ಇದೀಗ ಗಿರೀಶ್ ಕಾರ್ನಾಡ್ ಸೇರ್ಪಡೆ ಅಷ್ಟೇ. ಅನಂತ್ ಮೂರ್ತಿ ಸಾವನ್ನಪ್ಪಿದಾಗ ಆರಂಭವಾದ ಈ ವಿಕೃತಿ ಮುಂದಿವರೆದಿದೆ.
ಹೌದು, ಇತ್ತೀಚೆಗಷ್ಟೇ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಿಧನರಾದರು. ಆಗ ತೋವ್ರ ಬಲಪಂಥವಾದಿಗಳು ತುಂಬ ಕೆಟ್ಟದಾಗಿ ಕಮೆಂಟ್ ಹಾಕಿದರು. ಇವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲ ಆದವು.ಕೆಲವರ ಮೇಲೆ ಕೇಸು ಜಡಿಯಲಾಯಿತು.
ಆದರೆ ಇಲ್ಲೊಬ್ಬ ಇದೆಲ್ಲದಕಿಂತ ಮುಂದೆ ಹೋಗಿ ಹೇಳಿದ್ದೇನು ಗೊತ್ತೇ? ' ಗಿರೀಶ್ ಕಾರ್ನಾಡ್ ಸತ್ತಿದ್ದಕ್ಕೆ ಇಷ್ಟೊಂದು ಸಂಭ್ರಮಿಸುವ ನಾವು, ಸಿದ್ದರಾಮಯ್ಯ ಏನಾದರೂ ಸತ್ತರೇ ದೀಪಾವಳಿ ಆಚರಿಸೋಣ' ಎಂದಿದ್ದಾನೆ. ಈತನ ಹೆಸರು ನಿರಂಜನ ಗೌಡ ಹಿಂದು ಎಂದು.
ನಿರಂಜನ ಗೌಡ ಅವರ ಮಾತಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.