
ಐಎಂಎ ಜ್ಯೂವೆಲ್ಸ್ ಮಾಲೀಕ ಸಾರ್ವಜನಿಕರ 500 ಕೋಟಿ ಹೂಡಿಕೆ ಹಣದೊಂದಿಗೆ ನಾಪತ್ತೆ ಆಗಿದ್ದಾನೆ. ಇದು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮತ್ತದು ಪ್ರಕರಣ ಇದೀಗ ಬಹಿರಂಗವಾಗಿದೆ. ಇದು ವಂಚನೆಗೆ ಸಂಬಂಧ ಪಟ್ಟ ಮತ್ತೊಂದು ಪ್ರಕರಣವಾಗಿದೆ.
ಹೌದು, ಜಯನಗರದ 9ನೇ ರಸ್ತೆಯಲ್ಲಿದ್ದ ಎಐಎಂಎಂಎಸ್ ವೆಂಚರ್ಸ್ ಎನ್ನುವ ಹೆಸರಿನ ಕಂಪನಿ 1600 ಹೂಡಿಕೆದಾರರಿಗೆ ಬರೋಬ್ಬರಿ 1 ಸಾವಿರದ ಕೋಟಿಗಿಂತ ಅಧಿಕ ಹಣವನ್ನು ವಂಚನೆ ಮಾಡಿದೆ ಎನ್ನಲಾಗಿದೆ. ಈ ಕುರಿತು ತಿಲಕ ನಗರ ಹಾಗೂ ಜಯನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ನಿವಾಸಿಗಳಾದ ಅಯೂಬ್, ಇಲ್ಯಾಸ್, ಮುದಾಸ್ಸರ್, ಮುಜಾಹಿದ್, ಹಾಗೂ ಶಾಹೀದ್ ಎನ್ನುವವರು ಈ ಕಂಪನಿಯ ಮಾಲೀಕರು. ಮಹಿಳೆಯರನ್ನು ಗುರಿ ಆಗಿರಿಸಿಕೊಂಡು ಹಣ ಹೂಡಿಕೆ ಮಾಡಿಕೊಳ್ಳಲಾಗಿತ್ತು.ಅಲ್ಲದೇ 1 ಲಕ್ಷ ಠೇವಣಿ ಮಾಡಿದರೆ, ಪ್ರತಿ ತಿಂಗಳು 1 ಸಾವಿರ ಆದಾಯ ಬಡ್ಡಿ ನೀಡಲಾಗುವುದು ಎಂದಿದ್ದರು.