ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿ ಅಗಲಿದ್ದಾರೆ. ನಾಳೆ ದೆಹಲಿಯಲ್ಲಿ ನೀತಿ ಸಭೆ ಇದೆ. ಹೀಗಾಗಿ ಈ ಸಭೆಯಲ್ಲಿ ಭಾಗವಹಿಸೋಕೆ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದಾರೆ. ಆದರೆ ಈ ಸಭೆಗೂ ಮುನ್ನವೇ ಮೋದಿ ಅವರನ್ನು ಭೇಟಿ ಮಾಡೋಕೆ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

 

ಹೌದು, ನರೇಂದ್ರ ಮೋದಿ ಅವರು ಸತತ ಎರಡನೇ ಭಾರಿ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಮೋದಿ ಎರಡನೇ ಬಾರಿ ಪ್ರಧಾನಿ ಆದ ಮೇಲೆ, ಮೋದಿಯವರನ್ನು ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದಾರೆ.

 

ಕಳೆದ ಬಾರಿ ಮೋದಿಯನ್ನು ಭೇಟಿ ಮಾಡಿದಾಗ ರೇವಣ್ಣ, ದೇವೇಗೌಡ ಹಾಗೂ ನಿಯೋಗವೇ ಇತ್ತು. ಆದರೆ ಈ ಬಾರಿ ಕುಮಾರಸ್ವಾಮಿ ಒಬ್ವರೇ ಮೋದಿ ಅವರನ್ನು ಭೇಟಿ ಆಗಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬರಗಾಲ, ನರೇಗಾ ಅನುದಾನ ಹಾಗೂ ಹಲವು ವಿಷಯಗಳನ್ನು ಮೋದಿ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

 

Find out more: