ಇವಿಎಂಗಳ ಕುರಿತು ಈಗಾಗಲೇ ಅನೇಕ ಶಂಕೆಗಳು ಮೂಡಿದ್ದು, ಚುನಾವಣೆಯಲ್ಲಿ ಅದನ್ನು ಬಳಸಬೇಕೇ? ಅಥವಾ ಬೇಡವೇ ಎಂದು ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೋಯಿಲಿ ಅಭಿಪ್ರಾಯಪಟ್ಟಿದ್ದಾರೆ. ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಹೌದು, ಇವಿಎಂಗಳ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಇವಿಎಂಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು, ಇದನ್ನು ಪರಿಹಾರ ಮಾಡಬೇಕು ಎಂದು ವೀರಪ್ಪ ಮೊಯಿಲಿ ಹೇಳಿದರು.
ಅಮೇರಿಕದಂತಹ ರಾಷ್ಟ್ರಗಳು ಇವಿಎಂ ಬಳಕೆಯ ಬಳಿಕ, ಮತ್ತೆ ಮತ ಪತ್ರಗಳ ಹಿಂದಿನ ಪದ್ಧತಿಗೆ ಅವು ಹೊರಳಿವೆ ಎಂದಿದ್ದಾರೆ . ಇವಿಎಂ ಕುರಿತು ಗಂಬೀರ ಶಂಕೆ ಇದ್ದಾಗ ಚುನಾವಣೆ ಆಯೋಗ ಮತ್ತು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.