ಕಾಂಗ್ರೆಸ್ ಮುಖಂಡರೂ ಜಿಂದಾಲ್ ವಿರುದ್ಧ ಧ್ವನಿ ಎತ್ತಿರೋದು ವಿಶೇಷ. ಅದರಲ್ಲೂ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಅವರು ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ್ದ ಭೂಮಿಯ ಲೆಕ್ಕ ತಪಾಸಣೆ ಆಗಬೇಕು ಎಂದಿದ್ದಾರೆ.
ಹೌದು, ಜಿಂದಾಲ್ ಕಂಪನಿಗೆ 3666 ಎಕರೆ ಭೂಮಿಯನ್ನು ಸರ್ಕಾರ ಪರಭಾರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತೋವ್ರ ಆಕ್ಷೇಪವನ್ನು ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಂದಾಲ್ ಗೆ ಈ ಹಿಂದೆ ಭೂಮಿ ನೀಡಿದ ಬಗ್ಗೆ ಲೆಕ್ಕ ತಪಾಸಣೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಭೂಮಿ ಪರಭಾರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಚಿವ ಸಂಪುಟ ಉಪ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ಸಮಿತಿ ಗಂಭೀರ ಅಧ್ಯಯನ ಮಾಡಲು ಇದು ಸಕಾಲ. ಉಪ ಸಮಿತಿ ಶಿಪಾರಸಿನ ನಂತರ ಭೂಮಿ ಪರಬಾರೆ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಮಿತಿ ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದಿದ್ದಾರೆ.