ಹಿರಿಯ ನಾಗರಿಕರಿಗೆ ಈ ಹಿಂದೆ 600 ರೂ ಇದ್ದ ಮಾಶಾಸನವನ್ನು ಒಂದು ಸಾವಿರಕ್ಕೆ ಏರಿಸಿದ್ದ ಕುಮಾರಸ್ವಾಮಿ ಅವರು, ಇದೀಗ ಮತ್ತೆ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ, ಅಂಗವಿಕಲರಿಗೆ 2500 ರೂ. ಮಶಾಸನ ಹೆಚ್ಚಳ ಮಾಡಲಾಗುವುದ ಎಂದು ಘೋಷಣೆ ಮಾಡಿದ್ದಾರೆ.
ಹೌದು, ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂಧನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಕಲಚೇತನರೂ ನೆಮ್ಮದಿಯಿಂದ ಇರಬೇಕು ಎಂಬ ಆಶಯದಿಂದ ಅವಾರ ಮಾಸಾಶನವನ್ನು 2500ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇನೆ ಎಂದರು.
ಇಷ್ಟೇ ಅಲ್ಲದೇ, ಮುಂದುವರೆದು ಮಾತನಾಡಿದ ಅವರು, ಎಲ್ಲ ಜನರು ನೆಮ್ಮದಿಯಿಂದ ಬದುಕೋಕೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನೆಲ್ಲ ಕೈಗೊಳ್ಳಲಾಗುವುದು.ಇದೇ ಕಾರಣಕ್ಕಾಗಿ ಮಾಶಾಸನ ಹೆಚ್ಚಳಕ್ಕೆ ಮುಂದಾಗಿದ್ದೇನೆ. ಕೃಷಿಯ ಅಭಿವೃದ್ಧಿ ಮಾಡಲಿಕ್ಕೆ, ಸುಸ್ಥಿರ ಬದುಕು ರೂಪಿಸಿಕೊಳ್ಳುವುದಕ್ಕೆ ಸರ್ಕಾರ ಮುಂದಾಗುತ್ತದೆ ಎಂದು ಅವರು ಹೇಳಿದರು.