ಪ್ರಧಾನಿ ಮೋದಿ ಭಜನೆಯನ್ನು ಇಲ್ಲಿ ಮಾಡಿದರೆ ಪ್ರಯೋಜನವಿಲ್ಲ. ದೂರದ ದೆಹಲಿಯಲ್ಲೇ ಮೋದಿ ಭಜನೆ ಮಾಡಬೇಕು. ಮೋದಿ ಭಜನೆ ಮಾಡುವವವರಿಗೆ ರೈಲಿನಲ್ಲಿ ತಾವೇ ಕಳುಹಿಸಿಕೊಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಹೌದು, ರಾಯಚೂರಿನ ಮಾನ್ವಿ ತಾಲೂಕಿನ ಕರೀಗುಡ್ಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 'ನಮ್ಮ ಮುಂದೆ ಮೋದಿ ಭಜನೆ ಮಾಡಿದರೆ ಏನಾಗುತ್ತೆ? ತಮ್ಮ ನಿಮಗೆ ಅಷ್ಟೊಂದು ಇಷ್ಟವಿದ್ದರೆ ನೀವೆ ಮೋದಿ ಬಳಿಗೆ ಹೋಗಿ, ದೆಹಲಿಗೆ ತೆರಳಿ. ಒಂದು ವೇಳೆ ಹೋಗಲು ಸಾಧ್ಯವಿಲ್ಲ ಎಂದಾದರೆ ರೈಲು ವ್ಯವಸ್ಥೆಯನ್ನೂ ಮಾಡಿಕೊಡುತ್ತೇನೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ಇದರ ಖರ್ಚು, ವೆಚ್ಚ ಭರಸಲಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಅನೇಕರು ಅದ್ಯಾವ ನಿರೀಕ್ಷೆ ಇಟ್ಟುಕೊಂಡು ಮೋದಿಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಮೋದಿಗೆ ಮತ ಹಾಕಿ ನಮಗೆ ಕೆಲಸ ಮಾಡಿ ಎಂದು ಹೇಳುವುದು ಎಷ್ಟು ಸರಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೇ, ನಾನು ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸರ್ಮಥನೆ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಗೆ 4 ಸಾವಿರ ಕೋಟಿ ಬಿಡುಗಡೆ ಮಾಡಿದ ಕುಮಾರಸ್ವಾಮಿ ತಮ್ಮದು ಕೇವಲ ಹಾಸನ ಮಂಡ್ಯಕ್ಕೆ ಸೀಮಿತವಾದ ಸರ್ಕಾರ ಅಲ್ಲ ಅನ್ನೋದನ್ನು ಜನರಿಗೆ ಮನವರಿಕೆ ಮಾಡೋಕೆ ಪ್ರಯತ್ನ ಪಟ್ಟರು.