ಸಿಎಂ ಕುಮಾರಸ್ವಾಮಿ ಅವರು ಇಂದು ಬೀದರನಲ್ಲಿ ನಡೆದ ಜನತಾ ದರ್ಶನದಲ್ಲಿ ವಿಕಲಚೇತನರು ಹಾಗೂ ಪೋಷಕರ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಿಎಂ ಮಾನವೀಯತೆ ಮೆರೆದ ಘಟನೆಯೊಂದು ಜರುಗಿದೆ. ಅಷ್ಟಕ್ಕೂ ಆ ಘಟನೆ ಏನು ಅನ್ನೋದು ಇಲ್ಲಿದೆ ನೋಡಿ. 


ಆಕೆ ತಮ್ಮ ವಿಕಲಚೇತನ ಸಹೋದರನೊಂದಿಗೆ ಸಿಎಂ ಕುಮಾರಸ್ವಾಮಿಗೆ ಅಹವಾಲು ಬಂದಿದ್ದರು. ಆಗ ತಮ್ಮ ತಮ್ಮನ ಆರೋಗ್ಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದು ಸಿಎಂ ಅವರಲ್ಲಿ ಕೇಳಿಕೊಂಡಳು. ಜೊತೆಗೆ ನಾನು ಪಿಯುಸಿನಲ್ಲಿ ಶೇ. 94ರಷ್ಟು ಅಂಕಪಡೆದು ತೇರ್ಗಡೆಯಾಗಿದ್ದು, ಕೃಷಿ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದಳು.


ಇದಕ್ಕೆ ಸ್ಪಂಧಿಸಿದ ಸಿಎಂ ಕುಮಾರಸ್ವಾಮಿ ಅವರು, ಬಿಎಸ್ಸಿ ಓದಿಸಲು ಅಗತ್ಯ ನೆರವು ನೀಡೋದಾಗಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಇದರ ಜೊತೆಗೆ 2 ಲಕ್ಷ ರೂ ಬಿಡುಗಡೆ ಮಾಡಿದರು. ಊರುಗೋಲು ಹಿಡಿದುಕೊಂಡು ಮುಖ್ಯಮಂತ್ರಿ  ಬಳಿ‌ ಕೆಲವು ವಿಕಲಚೇತನರು ಮನವಿ ಸಲ್ಲಿಸಿದರು. 


Find out more: