ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೇಗುಡ್ಡ ಗ್ರಾಮ ವಾಸ್ತವ್ಯಕ್ಕೆ ತೆರಳಿದಾಗ ಒಂದು ಘಟನೆ ನಡೆದಿತ್ತು. ಈ ಘಟನೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಲ್ಲದೇ ಅಲ್ಲಿನ ಜನರ ವಿರುದ್ಧ ಕುಮಾರಸ್ವಾಮಿ ಸಿಟ್ಟಾಗಿ ಓಟು ಮೋದಿಗೆ ಹಾಕ್ತಿರಿ. ಕೆಲಸ ನಮಗೆ ಮಾಡ್ರೀ ಅಂತೀರಾ ಎಂದು ಸಿಡಿಮಿಡಿಗೊಂಡಿದ್ದರು. 


ಆವತ್ತು ಸಿಎಂ ಕುಮಾರಸ್ವಾಮಿ ಅವರ ಬಸ್ ತಡೆದು 50 ಜನರು ಪ್ರತಿಭಟನೆ ನಡೆಸಿದ್ದರು. ಇದೀಗ ಐವತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಉತ್ತರ ಕರ್ನಾಟಕದ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿದೆ. 


ಇದರ ಜೊತೆಗೆ ಭದ್ರತಾ ಲೋಪ ಎಸಗಿದ ಎನ್ನುವ ಕಾರಣದಿಂದ ಯರಗೇರಾ ವೃತ್ತದ ಇನ್ ಸ್ಪೆಕ್ಟರ್ ದತ್ತಾತ್ರೇಯ ಕಾರ್ನಾಡ ಅವರನ್ನು ಅಮಾನತುಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, ರಾಯಚೂರು ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ನಿಂಗಪ್ಪ ಅವರನನ್ನೂ ಸಹ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅಮಾನತುಗೊಳಿಸಿದ್ದಾರೆ. ಹೀಗಾಗಿ ಸಿಎಂ ಗ್ರಾಮ ವಾಸ್ತವ್ಯ ಪೊಲೀಸರಿಬ್ಬರ ಕೆಲಸಕ್ಕೆ ಕುತ್ತು ತಂದಿದೆ.



Find out more: