ಸಮ್ಮಿಶ್ರ ಸರ್ಕಾರ ಉರುಳುವ ಹಂತಕ್ಕೆ ಬಂದರೂ, ಕುಮಾರಸ್ವಾಮಿ ಆರಾಮಾಗಿಯೇ ಇದ್ದಾರೆ. ಆದರೆ ಇದೀಗ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಹೌದು, ಕಾಂಗ್ರೆಸ್ ಪಕ್ಷದಿಂದ ಸಸ್ಪೆಂಡ್ ಆಗಿರುವ ರೋಷನ್ ಬೇಗ್ ಅವರೂ ಸಹ ನಾಳೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.


ಈ ಬಗ್ಗೆ ರೋಷನ್ ಬೇಗ್ ಅವರೇ ಮಾತನಾಡಿದ್ದು, ನಾಳೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ರಾಜೀನಾಮೆ ಪರ್ವ ಮುಂದುವರೆದಿದ್ದು, ನಾಳೆ ರೋಷನ್ ಬೇಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡೋದು ಖಚಿತವಾಗಿದೆ. 


ಶಿವಾಜಿ ನಗರದ ಶಾಸಕರಾಗಿರೋ ರೋಷನ್ ಬೇಗ್, ಮುಂದೆ ಬಿಜೆಪಿಗೆ ಹೋಗೋದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ ಪಕ್ಷಕ್ಕೆ ನಷ್ಟವೇ ಎನ್ನಬಹುದು ಹೌದು, ಕಾಂಗ್ರೆಸ್ ಸದಸ್ಯ ಸ್ಥಾನಕ್ಕೂ ಶಾಸಕ ರೋಷನ್ ಬೇಗ್ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಇದು ಎರಡೆರಡು ಶಾಕ್ ನೀಡಲಿದೆ. 


Find out more: