ಕರ್ನಾಟಕ ರಾಜ್ಯ ಸರಕಾರ ಇದೀಗ ಪತನದತ್ತ ಸಾಗುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿರೋ ದೇವೇಗೌಡರು ಒಂದು ಹೊಸ ಪ್ಲಾನ್ ರೂಪಿಸಿದ್ದಾರೆ. ಅಷ್ಟಕ್ಕೂ ಆ ಪ್ಲಾನ್ ಏನು ಗೊತ್ತಾ? ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ, ಸಚಿವ ರೇವಣ್ಣಗೆ ಡಿಸಿಎಂ ಸ್ಥಾನ ನೀಡುವುದು.
ಹೌದು. ಸಿದ್ದು ಅವರನ್ನು ಸಿಎಂ ಮಾಡಿ, ರೇವಣ್ಣ ಅವರನ್ನು ಡಿಸಿಎಂ ಮಾಡುವುದು ದೇವೇಗೌಡ ಅವರ ಕಡೆಯ ಅಸ್ತ್ರವಾಗಿದೆ. ಈ ಮೂಲಕ ಸಿಟ್ಟಾಗಿರುವ ಸಿದ್ದರಾಮಯ್ಯ ಆಪ್ತರು, ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರಿನ ಕಾಂಗ್ರೆಸ್ ಶಾಸಕರು ವಾಪಾಸ್ ಬರಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಸರ್ಕಾರ ಉಳಿಸಲು ಯಾವುದೇ ತಂತ್ರವಾದರೂ ಸರಿ. ಅದನ್ನು ಮಾಡಬೇಕು ಎನ್ನುವ ಅನಿವಾರ್ಯತೆ ಇದೀಗ ಸೃಷ್ಟಿಯಾಗಿದೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡಿಗೂ ಈ ವಿಷಯ ತಿಳಿಸಲಾಗಿದ್ದು, ಮುಂದಿನ ನಡೆಯನ್ನು ಕಾದು ನೋಡಬೇಕಿದೆ.