ರಾಜ್ಯ ಸಮ್ಮಿಶ್ರ ಸರ್ಕಾರ ಉಳಿಯುತ್ತಾ? ಅಥವಾ ಉರುಳುತ್ತಾ ಅನ್ನೋದಕ್ಕೆ ಉತ್ತರ ಇನ್ನೂ ಖಚಿತ ಆಗಿಲ್ಲ. ಬರೋಬ್ಬರಿ 13 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ, ಜೊತೆಗೆ ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನ ಆಗುತ್ತೆ ಎನ್ನಲಾಗುತ್ತಿದೆ. ಆದರೆ ಎಲ್ಲದಕ್ಕೂ ನಾಳೆ ಸಿಗಲಿದೆ.

ಹೌದು, ಸ್ಪೀಕರ್ ರಮೇಶ್ ಕುಮಾರ್ ಅವರು ತಮಿಳುನಾಡಿನ ವೆಲ್ಲೂರಿಗೆ ತೆರಳಿದ್ದು, ನಾಳೆ ವಿಧಾನ ಸೌಧಕಕ್ಕೆ ಆಗಮಿಸಲಿದ್ದಾರೆ. ನಂತರ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ಪರಿಶೀಲನೆ ನಡೆಯಲಿದೆ. ಅವರು ಕೂಡಲೇ ರಾಜೀನಾಮೆಯನ್ನು ಅಂಗೀಕರಿಸಿಬಿಡುತ್ತಾರೆ ಎಂದೇನೂ ಇಲ್ಲ. ಮೊದಲು ರಾಜೀನಾಮೆಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಿದ್ದಾರೆ, ಆನಂದ್ ಸಿಂಗ್‌ಗೆ ಇಂದು ನೊಟೀಸ್ ಹೋಗಿದೆ. 

ನಂತರ ರಾಜೀನಾಮೆ ನೀಡಿದ ಶಾಸಕರಿಗೆ ಕಾರಣ ಕೇಳುತ್ತಾರೆ, ಅಷ್ಟೇ ಅಲ್ಲದೇ ತಮ್ಮ ನಿರ್ಣಯವನ್ನು ಪುನರ್‌ ಪರಿಶೀಲನೆ ಮಾಡಿಕೊಳ್ಳಲು ಸಮಯವನ್ನೂ ನೀಡುತ್ತಾರೆ. ಒಟ್ಟಾರೆ ಶಾಸಕರು ಸ್ಪೀಕರ್ ಮನವಿಗೆ ಒಪ್ಪುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ನಾಳೆ ಉತ್ತರ ದೊರೆಯಲಿದೆ.


Find out more: