ನಿನ್ನೆ 12 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಇದೀಗ ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡ ಬಿಜೆಪಿಗೆ ಬೆಂಬಲಲ ನೀಡಿರುವ ಕಾರಣ, ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಅಲ್ಲದೇ, ಯಾವುದೇ ಕ್ಷಣದಲ್ಲೂ ಅದು ಪತನ ಆಗುವ ಸಾಧ್ಯತೆ ಇದೀಗ ಎದುರಾಗಿದೆ. 

ನಿನ್ನೆ 12, ಇಂದು 1 ಹೀಗಾಗಿ ಪಟ್ಟಾರೆ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ಸಂಕ್ಯೆ 104 ಕ್ಕೆ ಇಳಿದಿದೆ. ಅಲ್ಲದೇ ಹೆಚ್. ನಾಗೇಶ್ ಬಿಜೆಪಿಗೆ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಹೀಗಾಗಿ ಬಿಜೆಪಿಯ ಸಂಕ್ಯೆ 106ಕ್ಕೆ ಏರಿಕೆಯಾಗಿದೆ.

ಶನಿವಾರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದವು. ಸದ್ಯದ ಪರಿಸ್ಥಿತಿಯ ಪ್ರಕಾರ, ನೋಡಿದ್ರೆ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಇನ್ನು ಮುಂದಿನ ನಿರ್ಧಾರ ಏನು ಅನ್ನೋದು ಮಾತ್ರ ನಾಳೆ ನಡೆಯಲಿರುವ ಸ್ಪೀಕರ್ ರಮೇಶ್ ಕುಮಾರ್ ಅವರು ನಡೆಸಲಿರುವ ವಿಚಾರಣೆ ಅಷ್ಟೇ.


Find out more: