ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವು ಒಳಿತು. ಅಲ್ಲದೇ ರಾಷ್ಟ್ರಪತಿ ಆಡಳಿತ ಹೇರೋದು ಸಮಂಜಸ ಎಂದು ಕೇಂದ್ರ ಸರ್ಕಾರಕ್ಕೆ ಮಿತಪಕ್ಷ ಶಿವಸೇನೆ ಆಗ್ರಹಿಸಿದೆ.
ಶಾಸಕರ ರಾಜೀನಾಮೆ, ಅನರ್ಹತೆ, ವಿಪ್ ಹಾಗೂ ಹತ್ತು ಹಲವು ಬೆಳವಣಿಗೆಗಳು ನಡೆದಿವೆ. ಅಲ್ಲದೇ ವಿಶ್ವಾಸಮತ ಯಾಚನೆ ವಿಳಂಬ ಆಗುತ್ತಿದೆ.ಸುಪ್ರೀಂಕೋರ್ಟ್ ತೀರ್ಪು, ಸಾಂವಿಧಾನಿಕ ಹುದ್ದೆಗಳ ನಡುವಿನ ತಿಕ್ಕಾಟ ಕರ್ನಾಟಕ ದೇಶದ ಗಮನ ಸೆಳೆದಿದೆ. ಈ ಬಗ್ಗೆ ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿ ಬರೆಯಲಾಗಿದೆ.
ಅಷ್ಟಕ್ಕೂ ಶಿವಸೇನಾದ ಸಾಮ್ನಾದಲ್ಲಿ ಬರೆದಿದ್ದು ಏನು ಗೊತ್ತಾ? ಕರ್ನಾಟಕದಲ್ಲಿ ಎಲ್ಲರೂ ಪ್ರಜಾಪ್ರಭುತ್ವ ಹಾಳುಗೆಡವುತ್ತಿದ್ದಾರೆ. ಜೊತೆಗೆ ಇಲ್ಲಿ ಎರಡು ಕಡೆಗಳ ನಾಟಕವನ್ನು ನೋಡುತ್ತಾ ಕೇಂದ್ರ ಸರ್ಕಾರ ಸುಮ್ಮನಿದೆ ಏಕೆ? ಎಂದು ಪ್ರಶ್ನೆ ಮಾಡಲಾಗಿದೆ. ಅಲ್ಲದೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಅಥವಾ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡುವುದೊಂದೆ ಮಾರ್ಗೋಪಾಯ, ಏನಾದರೂ ಮಾಡಿ ಕರ್ನಾಟಕದಲ್ಲಿನ ಈ ನಾಟಕ ನಿಲ್ಲಿಸಿ ಎಂದು ಸಾಮ್ನಾ ಪತ್ರಿಕೆಯಲ್ಲಿ ಖಾರವಾಗಿ ಬರೆಯಲಾಗಿದೆ.