ನಿನ್ನೆ ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲಾಗಿದೆ. ಹೀಗಾಗಿ ಬಹುದೊಡ್ಡ ಪಕ್ಷವಾಗಿರೋ ಬಿಜೆಪಿಯು ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದೆ. ಮೈತ್ರಿಯ ನಾಯಕರು ಈಗಾಗಲೇ ಅಧಿಕಾರದ ಆಸೆಯನ್ನು ಕೈಬಿಟ್ಟು ಗೂಡು ಸೇರಿಕೊಂಡಿದ್ದಾರೆ. ಇಂದು ಯಡಿಯೂರಪ್ಪ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ರಾಜ್ಯಪಾಲರು ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆ ಮಾಡೋಕೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಬಹುತೇಕ ಇಂದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಕನಸು ನಸಾದಂತಾಗಿದೆ.


ಆದರೆ ಇದೀಗ ಯಡಿಯೂರಪ್ಪ ಅವರು, ಹೈಕಮಾಂಡ್ ಅವರ ನಿರ್ದೇಶನಕ್ಕೆ ಕಾಯುತ್ತಿದ್ದಾರೆ. ಸರ್ಕಾರ ರಚನೆ ರೂಪುರೇಷೆಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಅವರಿಂದ ಯಡಿಯೂರಪ್ಪ ಸಲಹೆ ಕೇಳಿದ್ದಾರೆ. ಇದಕ್ಕೆ ಉತ್ತರ ಬಂದರೆ ನಂತರ, ಪ್ರಮಾಣ ವಚನದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗಗೊಳ್ಳುತ್ತಾರೆ.



Find out more: