ಯಡಿಯೂರಪ್ಪ ಅವರು ಒಂದು ವೇಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಾಂಬೆಯಲ್ಲಿ ಕೂತಿರುವ ಸಂತೃಪ್ತರಿಗೆ ಸಚಿವ ಸ್ಥಾನ ನೀಡದಿದ್ದರೆ, ಅವರು ಯಡಿಯೂರಪ್ಪ ಅವರನ್ನು ಹರಿದು ನುಂಗಿ ಹಾಕಿ ಬಿಡುತ್ತಾರೆ ಎಂದು ಡಿಕೆಶಿವಕುಮಾರ್ ಅವರು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ ರಾಜಕೀಯ ವಿಚಾರದಲ್ಲಿ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಡಿಕೆ ಶಿವಕುಮಾರ್, "ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ, ಯಡಿಯೂರಪ್ಪ ಅವರ ಕಥೆ ಗೋವಿಂದಾ ಗೋವಿಂದಾ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಷ್ಟಕ್ಕೂ ಈ ವೇಳೆ ಅವರು ಹೇಳಿದ್ದೇನು ಅನ್ನೋದು ಇಲ್ಲಿದೆ ನೋಡಿ.
"30-40 ವರ್ಷಗಳ ಕಾಲ ಸಾಕಿ ಸಲುಹಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ ನಮ್ಮನ್ನೇ ಅತೃಪ್ತ ಶಾಸಕರು ಬಿಡಲಿಲ್ಲ. ಇನ್ನು ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದರೆ ಅವರು ಬಿಡುತ್ತಾರೆಯೇ? ಇಲ್ಲ ಯಡಿಯೂರಪ್ಪ ಅವರನ್ನು ಹರಿದು ನುಂಗಿ ಹಾಕ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.