ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ನಿಂದ ಎಷ್ಟು ಹಣ ಸಂಪಾದಿಸಬಹುದು ಎನ್ನೋದನ್ನು ನೀವು ಕೇಳಿದರೆ ಗಾಬರಿ ಆಗ್ತೀರಿ. ಇಂಗ್ಲೆಂಡ್ ಸಂಸ್ಥೆಯೊಂದು ಪಟ್ಟಿ ಬಿಡುಗಡೆ ಮಾಡಿದೆ. ಇನ್ಸ್ಟಾಗ್ರಾಮ್ ಹೂಪರ್ 'ಇನ್ಸ್ಟಾ ಗ್ರಾಮ ಶ್ರೀಮಂತರ ಪಟ್ಟಿ ೨೦0೧೯ ಬಿಡಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಭಾರತ ಪ್ರಿಯಾಂಕಾ ಚೋಪ್ರಾ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲ, ವಿರಾಟ್ ಕೋಹ್ಲಿ ಕೂಡ ಇದರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಯಾಂಕಾ ಅವರನ್ನು 4.30 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಅವರು ಹಾಕುವ ಒಂದು ಪೋಸ್ಟ್ 1.87 ಕೋಟಿ ರೂ ಪಡೆಯುತ್ತಾರೆ.
ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಖಾತೆಯನ್ನು 3.61 ಕೋಟಿ ಅಧೀಕ ಮಂದಿ ಫಾಲೋ ಮಾಡುತ್ತಿದ್ದು, 1.35 ಕೋಟಿ ಪಡೆಯುತ್ತಿದ್ದಾರೆ. ಟಾಪ್ 100 ಪಟ್ಟಿಯಲ್ಲಿ ಪ್ರಿಯಾಂಕಾಗೆ 19ನೇ ಸ್ಥಾನ ಸಿಕ್ಕಿದ್ದು, ಕೊಹ್ಲಿಗೆ 23 ಸ್ಥಾನ ಸಿಕ್ಕಿದೆ.