ಜೆಡಿಎಸ್ ಪಕ್ಷವು ಬರುಬರುತ್ತ ಅಶಕ್ತವಾಗುತ್ತಿದೆಯೇ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಹೌದು ಇದಕ್ಕೆ ಕಾರಣ ಹಲವು. ಅದರಲ್ಲೂ ಜೆಡಿಎಸ್ ಪಕ್ಷದಲ್ಲಿ ಒಬ್ಬೊಬ್ಬರಾಗಿಯೇ ರಾಜೀನಾಮೆ ಎನ್ನುತ್ತಿದ್ದಾರೆ. ದೇವೇಗೌಡರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ತನಕ ರಾಜೀನಾಮೆ ಎನ್ನುತ್ತಿದ್ದಾರೆ. ಸದ್ಯದ ಬೆಳವಣಿಗೆಯಲ್ಲಿ ಇದೀಗ ಚುನಾವಣಾ ರಾಜಕೀಯಕ್ಕೆ ಜಿ.ಟಿ‌.ದೇವೇಗೌಡ ನಿವೃತ್ತಿ ಘೋಷಿಸಿದ್ದಾರೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. 

ಹೌದು, ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ ಅವರು ಇದು ನನ್ನ ಕೊನೆ ಚುನಾವಣೆ. ನನಗೆ ಚುನಾವಣೆ ಸಾಕಾಗಿ ಹೋಗಿದೆ. ಅಲ್ಲದೇ, ಚುನಾವಣೆ ರಾಜೀಯದಿಂದ ದೂರ ಸರಿಯುತ್ತೇನೆ ಎಂದು ಜಿ.ಟಿ.ದೇವೇಗೌಡ ಅವರು ಹೇಳಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಹೌದು, ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಅವರನ್ನು ನಾನು ದೇವರಂತೆ ಭಾವಿಸಿದ್ದೆ. ಅವರು ಹೇಳಿದ ಎಲ್ಲ ಕೆಲಸಗಳನ್ನೂ ಚಾಚು ತಪ್ಪದೇ ಮಾಡಿದ್ದೇನೆ. ಅಲ್ಲದೇ ಅವರು ನನ್ನ ಮಗ ಹರೀಶ್‌ನಿಗೆ ಮುಂದಿನ ಭಾರಿ ಟಿಕೇಟ್ ನೀಡುತ್ತೇನೆ ಎಂದು ನನಗೆ ಭರವಸೆ ನೀಡಿದ್ದರು. ಆದರೆ ಇದೀಗ ಅದ್ಯಾವ ಪ್ರಸ್ತಾಪವನ್ನೂ ಅವರು ಮಾಡಿಲ್ಲ. ಇದರಿಂದ ನಾನು ಸಾಕಷ್ಟು ನೊಂದಿದ್ದೇನೆ ಎಂದು ಹೇಳಿದರು. 

ಇನ್ನು ಮುಂದುವರೆದು ಮಾತನಾಡಿದ ಅವರು, ನಾನು ನನ್ನದೇ ಸ್ವಂತ ಖರ್ಚಿನಲ್ಲಿ ಚುನಾವಣೆ ಎದುರಿಸಿದ್ದೇನೆ. ಇದಕ್ಕೆ ದೇವೇಗೌಡ ಆಗಲಿ, ಕುಮಾರಸ್ವಾಮಿ ಆಗಲಿ ಅಲ್ಲದೇ ಸಿದ್ದರಾಮಯ್ಯ ಅವರಾಗಲೀ ಯಾರೂ ನನಗೆ ಸಹಾಯ ಮಾಡಿಲ್ಲ. ಹೀಗಾಗಿ ನಾನು ಗೆದ್ದಿರೋದು ಪ್ರಾಮಾಣಿಕವಾಗಿ ಎಂದು ಅವರು ಹೇಳಿದರು. 

ಅಲ್ಲದೇ ಅವರಿಗೆ ನೀಡಿದ ಖಾತೆ ಬಗ್ಗೆ ಮಾತನಾಡಿದ ಜಿ.ಟಿ.ದೇವೇಗೌಡ ಅವರು, ತಮಗೆ ನೀಡಿದ ಖಾತೆಯ ಬಗ್ಗಯೂ ಅವರು ಅಸಮಾಧಾನ ಹೊರಹಾಕಿದ್ದಾರೆ. ನನಗೆ ಬೇಡವಾಗಿದ್ದರೂ ಅವರು ನನಗೆ ಇಷ್ಟವಿಲ್ಲದ ಖಾತೆಯನ್ನು ನೀಡಿದರು. ನಾನು ಉನ್ನತ ಶಿಕ್ಷಣ ಖಾತೆ ಬೇಡ ಎಂದು ಹೇಳಿದ್ದೆ. ನನಗೆ ಇಷ್ಟವಾದ ಖಾತೆಯನ್ನು ಪಡೆಯೋದಕ್ಕೆ ಒಂದು ತಿಂಗಳು ಕಾದೆ ಅದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದರು  


Find out more: