ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ಕೂರಿಸಬೇಕು ಅನ್ನುವ ಆಲೋಚನೆ ತುಂಬ ದಿನಗಳಿಂದ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಇದೀಗ ಸೋನಿಯಾ ಗಾಂದಿ ಅವರೇ ಮಧ್ಯಂತರ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ಈ ಮೂಲಕ ಮತ್ತೆ ಗಾಂಧೀ ಕುಟುಂಬವೇ ಅಧ್ಯಕ್ಷ ಸ್ಥಾನನಕ್ಕೆ ಕುಳಿತುಕೊಂಡಂತೆ ಆಗಿದೆ. ಮುಂದಿನ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧೀಯವರೇ ಮಧ್ಯಂತರ ಹೊಣೆಯನ್ನು ಹೊತ್ತಿರುತ್ತಾರೆ. ಆದರೆ ಅದ್ಯಾವಾಗ ಅಧ್ಯಕ್ಷರ ನೇಮಕ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. 

ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ರಾತ್ರಿಯವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳೋಕೆ ಆಗಿರಲಿಲ್ಲ. ಮದ್ಯಾಹ್ನದ ಹೊತ್ತಿಗೆ ಅಲ್ಲದೇ ಸೋನಿಯಾ ಗಾಂಧೀ ಮತ್ತು ರಾಹುಲ್ ಗಾಂಧಿ ಅಲ್ಲಿಂದ ನಿರ್ಗಮಿಸಿದ್ದರು. ಆದರೆ ರಾತ್ರಿ 9 ಗಂಟೆ ವೇಳೆಗೆ ಇಬ್ಬರೂ ನಾಯಕರು ಈ ಸಭೆಗೆ ವಾಪಾಸ್ ಬಂದಿದ್ದರು. 

ಸೋನಿಯಾ ಗಾಂಧೀ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಹುಲ್ ಗಾಂಧೀ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅಲ್ಲದೇ ಇದೀಗ ಸೋನಿಯಾ ಗಾಂಧೀ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಪಕ್ಷದ ನಾಯಕ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರು ರಾತ್ರಿ ನಡೆದ ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿದರು. 

ಗಾಂಧಿ ಕುಟುಂಬದ ಯಾರೂ ಕೂಡ ಈ ಹುದ್ದೆಯನ್ನು ಅಲಂಕಾರ ಮಾಡುವುದಿಲ್ಲ ಎಂದು ರಾಹುಲ್ ಗಾಂಧೀ ತಮ್ಮ ರಾಜೀನಾಮೆ ವೇಳೆ ಹೇಳಿದ್ದರು. ಅದಾದ ನಂತರ ಹೊಸ ಅಧ್ಯಕ್ಷರಿಗಾಗಿ ಹುಡುಕಾಟ ನಡೆದಿತ್ತು. ಆದರೆ ಯಾವುದೇ ತೀರ್ಮಾನಕ್ಕೆ ಬರೋಕೆ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಗಾಂಧಿ ಕುಟುಂಬದವರಿಗೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲಾಗಿದೆ. 

ಮಧ್ಯಂತರ ಅಧ್ಯಕ್ಷರ ಆಯ್ಕೆ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧೀ ಮತ್ತು ಸೋನಿಯಾ ಗಾಂಧಿ ಅವರು ದೂರ ಉಳಿದಿದ್ದರು. ಆದರೆ ಪ್ರಿಯಾಂಕಾ ವಾದ್ರಾ ಮಾತ್ರ ಭಾಗಿಯಾಗಿದ್ದರು. ರಾತ್ರಿ 8 ಗಂಟೆ ವೇಳೆಗೆ ಮತ್ತೊಮ್ಮೆ ಸಭೆ ಸೇರಿದಾಗ ಎಲ್ಲರೂ ರಾಹುಲ್ ಗಾಂಧೀಯವರೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಅಭಿಪ್ರಾಯ ವ್ಯಕ್ತವಾದವು.. ಆದರೆ ರಾಹುಲ್ ಗಾಂಧಿ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ..


Find out more: