ಉತ್ತರ ಕರ್ನಾಟಕ ಐದು ಜಿಲ್ಲೆಗಳಲ್ಲಿ ಪ್ರವಾಹ ದೊಡ್ಡ ಮಟ್ಟದಲ್ಲಿ ಉಂಟಾಗಿ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಸಾವಿರಾರು ಜಾನುವಾರುಗಳು ಜೀವ ಕಳೆದುಕೊಂಡಿವೆ. ಸತತವಾಗಿ ಒಂದು ವಾರದಿಂದ ಸುರಿದ ಮಳೆಗೆ ಇಡೀ ಬೆಳಗಾವಿಗೆ ಬೆಳಗಾವಿಯೇ ಮುಳುಗಿ ಹೋಗಿದೆ. ಇದರ ಬೀಕರತೆಗೆ ಲಕ್ಷಾಂತರ ಜನರು ಬೀದಿಗೆ ಬಂದಿದ್ದಾರೆ, ಹೀಗಾಗಿ ರಾಜ್ಯ ಸರ್ಕರ ಸಂತ್ರಸ್ತರಿಗೆ ಪರಿಹಾರ ಕೊಡೋಕೆ ಮುಂದಾಗಿದೆ. ಒಂದು ಅಂದಾಜಿನ ಪ್ರಕಾರ, ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ. 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಮೂರು ಸಾವಿರ ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇನ್ನೂ ಈ ಹಣವನ್ನು ಬಿಡುಗಡೆ ಮಾಡಿಲ್ಲ. ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಇನ್ನು ಇವತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅವರ ಜೊತೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಹ ಹಾಜರಿದ್ದರು. 

ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಹಿರಿಯ ಅಧಿಕಾರಿಗಳ ಜೊತೆಗೆ ಸುದ್ದಿಗೋಷ್ಟಿ ನಡೆಸಿದರು. ಹತ್ತು ಸಾವಿರ ಕೋಟಿ ಹಾನಿಯಾಗಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಆದರೆ ಪ್ರವಾಹದ ಪರಿಸ್ಥಿತಿ ನೋಡಿದರೆ, ಅಂದಾಜು 30 ರಿಂದ 40 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ ಎಂದು ನನ್ನ ಅಭಿಪ್ರಾಯವಾಗಿದೆ. ಸಮಗ್ರ ಸಮೀಕ್ಷೆ ಬಳಿಕಷ್ಟೇ ಇದರ ನಿಖರತೆ ಗೊತ್ತಾಗುತ್ತದೆ ಎಂದು ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. 


ಸದ್ಯಕ್ಕೆ ಜನಜಾನುವಾರುಗಳ ರಕ್ಷಣೆ ಮಾಡುವುದು, ವಸತಿ ರಹಿತರಿಗೆ ವಸತಿ ಕಲ್ಪಿಸುವುದು, ಸರ್ಕಾರದ ಮೊದಲ ಆಧ್ಯತೆ ಆಗಿದೆ. ಬೆಳೆಹಾನಿಯಿಂದ ತತ್ತಿರಿಸಿದ ರೈತರು ಇನ್ನೇನು ಆತಂಕ ಪಡಬೇಕಾಗಿಲ್ಲ. ಅವರಿಗೆ ಸೂರು ಒದಗಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರವೂ ನಮಗೆ ಭರವಸೆ ನಿಡಿದೆ. ನಾವೂ ನಿಮಗೆ ಭರವಸೆ ನೀಡುತ್ತೇವೆ. ನಿರಾಶ್ರಿತರಿಇಗೆ ಪರಿಹಾರ ಒದಗಿಸುವುದೇ ನಮಗೆ ಮೊದಲ ಆಧ್ಯತೆ ಆಗಿದೆ ಎಂದು ಅವರು ಹೇಳಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಯುಸೇನೆ ಹೆಲಿಕ್ಯಾಪ್ಟರ್‌ ನಲ್ಲಿ ಸತತವಾಗಿ ಎರಡು ಗಂಟೆಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳಲ್ಲು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಅದ್ಯಾವಾಗ ಪರಿಹಾರ ನೀಡುತ್ತಾರೆ ಎಂದು ಸಂಸತ್ರಸ್ತರು ಎದುರು ನೋಡುತ್ತಿದ್ದಾರೆ ಅನ್ನೋದು ಮಾತ್ರ ಸತ್ಯ.
 


Find out more: