ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಉದ್ಯಮಿಯಾಗಿದ್ದ ವಿಜಿ ಸಿದ್ಧಾರ್ಥ ಅವರ ಸಾವು ನಿಜಕ್ಕೂ ಎಲ್ಲರನ್ನೂ ದಂಗು ಬಡಿಸಿತ್ತು. ಅವರ ಸಾವಿನ ಕುರಿತು ಅನೇಕ ಊಹಾಪೋಹಗಳು ಹರಿದಾಡಿದ್ದವು. ಆದರೆ ಇದೀಗ ಸಿದ್ಧಾರ್ಥ ಅವರ ಸಾವಿನ ರಹಸ್ಯ ಬಯಲಾಗಿದೆ. ಅಲ್ಲದೇ ಆತ್ಮಹತ್ಯೆಯಿಂದಲೇ ಅವರ ಸಾವು ಸಂಭವಿಸಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಈ ವರದಿಯನ್ನು ಅನುಮೋದಿಸಿ ಈ ಸಾವು ಆತ್ಮಹತ್ಯೆ ಎಂದು ದೃಢಪಡಿಸಿದ್ದಾರೆ. 

ಕಳೆದ ವಾರವಷ್ಟೇ ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯನ್ನು ಸಿದ್ಧಪಡಿಸಿ ಇದು ಆತ್ಮಹತ್ಯೆ ಎಂದು ಖಚಿತಪಡಿಸಿತ್ತು. ಆದರೆ ಸಿದ್ಧಾರ್ಥ ಅವರ ಸಾವಿನ ತನಿಖೆ ಕೈಗೊಂಡಿರುವ ತಂಡಕ್ಕೆ ಅದು ತಲುಪಿಸಿದೆ. ಅದನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ನೀಡಿದ್ದ ತನಿಖಾಭಿಪ್ರಾಯ ಕೋರಿದ್ದಾರೆ. ಅಲ್ಲದೇ ಆ ಎಫ್ಎಸ್‌ಎಲ್‌ ವರದಿ ಸಲ್ಲಿಸಿರುವ ವೈದ್ಯರು, ಸಿದ್ದಾರ್ಥ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ಹೇಳಿದ್ದಾರೆ. 

ಎಫ್‌ಎಸ್‌ಎಲ್‌ ತಜ್ಞರು ಸಿದ್ದಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ನೀರಿರೋದು ಎಲ್ಲರಿಗೂ ಗೊತ್ತೇ ಇದೆ. ಅಲ್ಲದೇ ಇದೀಗ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಹ ಈ ವರದಿಯನ್ನು ಅನುಮೋದನೆ ಮಾಡಿದ್ದಾರೆ. ಅಲ್ಲದೇ ತನಿಖಾ ತಂಡವೂ ಸಹ ಇದೇ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.

 ಸಿದ್ದಾರ್ಥ ಅವರು ದೊಡ್ಡ ಉದ್ಯಮಿ. ಕೆಫೆ ಕಾಫಿ ಡೆ ಸಂಸ್ಥೆ ಕಟ್ಟಿ ಬೆಳೆಸಿ ಇಡೀ ಜಗತ್ತಿನಲ್ಲಿಯೇ ದೊಡ್ಡ ಮಟ್ಟದ ಹವಾ ಸೃಷ್ಟಿಸಿದ್ದರು. ಅವರು ಮಂಗಳೂರಿನ ನೇತ್ರಾವತಿ ನದಿ ಸೇತುವೆ ಸಮೀಪದಿಂದ ಜುಲೈ 29ರಂದು ನಿಗೂಢವಾಗಿ ನಾಪತ್ತೆ ಆಗಿದ್ದರು. ನಂತರ ಹೊಯ್ಗೆ ಬಜಾರ್ ಎನ್ನುವ ಸಮೀಪದ ಶರಾವತಿ ನದಿಯಲ್ಲಿ ಅವರ ಆಗಸ್ಟ್ 1 ರಂದು ಅವರ ಮೃತದೇಶ ಪತ್ತೆ ಆಗಿತ್ತು. ಕೊನೆಗೆ ನೀರಿಗೆ ಬಿದ್ದ ಉಸಿರುಗಟ್ಟಿ ಅವರು ಸಾವನ್ನಪ್ಪಿದ್ದಾರೆ ಎನ್ನುವ ತೀರ್ಮಾನ ಮಾಡಲಾಗಿದೆ. 

ಈಗಾಗಲೇ ಮರಣೋತ್ತರ ಪರೀಕ್ಷೆಯಲ್ಲಿ ನಿರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಅಂತಿಮ ವರದಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಕೋದಂಡರಾಮ್ ಅವರಿಗೆ ತಲುಪಿದೆ ಎಂದು ತಿಳಿದು ಬಂದಿದೆ.


Find out more: