ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅತೃಪ್ತರ ವಿರುದ್ಧ ಕಿಡಿ ಕಾರಿದ್ದಾರೆ. ಹಾಲು ಕುಡಿದವರೇ ಬದುಕುವುದಿಲ್ಲ ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. ಹೌದು, ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ ಶಾಸಕರನ್ನೇ ಇಟ್ಟುಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಬಿಎಸ್‌ವೈ ವಿರುದ್ಧ ಟೀಕೆ ಮಾಡಿದರು.
ಹೌದು ಪಕ್ಷದವರನ್ನೇ ಇಟ್ಕೊಂಡು ಸರ್ಕಾರ ಮಾಡೋಕೆ ಆಗಲ್ಲ. ಇನ್ನು ಇಂತಹ ಸಮಯದಲ್ಲಿ ಅತೃಪ್ತರನ್ನಿಟ್ಟುಕೊಂಡು ಪಕ್ಷವನ್ನು ನಡೆಸಲು ಸಾಧ್ಯವಿದೆಯಾ ಎಂದು ಸಿದ್ದರಾಮಯ್ಯ ಅವರ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಸರ್ಕಾರ ನಡೆಸೋಕೆ ಆಗೋದಿಲ್ಲ ಎಂದು ಹೇಳಿದಂತಾಗಿದೆ. ಮುಂದುವರೆದು ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಸರ್ಕಾರ ಬಹಳ ದಿನ ಇರುತ್ತೆ ಎಂದು ಯಾರಿಗೂ ನಂಬಿಕೆ ಇಲ್ಲ ಎನ್ನುವ ಬಾಂಬ್ ಕೂಡ ಹಾಕಿದರು.
ಅಲ್ಲದೇ ಅತೃಪ್ತರನ್ನು ಇಟ್ಕೊಂಡು ಸರ್ಕಾರ ಮುನ್ನಡೆಸೋಕೆ ಆಗಲಲ್ಲ. ಹಾಲು ಕುಡಿದ ಮಕ್ಕಳೆ ಬದುಕಲ್ಲ. ಇನ್ನು ವಿಷ ಕುಡಿದವರು ಬದಕ್ತಾರಾ ಎಂದು ಮಾರ್ಮಿಕವಾಗಿ ಯಡಿಯೂರಪ್ಪ ಅವರಿಗೆ ತಿವಿದರು. ಇಷ್ಟೇ ಅಲ್ಲದೇ ಸಿದ್ದರಾಅಮಯ್ಯ ಅವರು ಇನ್ನು ಮತ್ತಷ್ಟು ಟೀಕಾ ಪ್ರಹಾರ ಮಾಡಿದ್ದಾರೆ.
ರಾಜ್ಯದ ಉತ್ತರ ಭಾಗದಲ್ಲಿ ನೆರೆ ಬಂದಾಗ ಬಿಜೆಪಿ ಸರ್ಕಾರದ ಸಚಿವರು ಆಯಾ ಜಿಲ್ಲೆಗಳಲ್ಲಿ ಇರಬೇಕಿತ್ತು. ಅದರೆ ಸಚಿವ ಸಂಪುಟವೇ ಇರಲಿಲಲ್ಲ. ದೆಹಲಿ ಟು ಬೆಂಗಳೂರು ಮಧ್ಯೆ ಪ್ರವಾಸ ಮಾಡಿದರು ಯಡಿಯೂರಪ್ಪ ಎಂದು ಹೇಳಿದರು. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
ಅಲ್ಲದೇ ಬಿಜೆಪಿಯು ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದು ಕುಟುಕಿದರು. ಇನ್ಮೇಲಾದರೂ ಬಿಜೆಪಿಯ ನಾಯಕರು ಜನರ ಕಡೆ ನೋಡಬೇಕು. ಆದರೆ ಸಿಎಂ ಯಡಿಯೂರಪ್ಪ ಜನರ ಕಡೆಗೆ ಗಮನ ಕೊಡದೇ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.