ಮೈತ್ರಿ ಸರ್ಕಾರವನ್ನು ಕೆಡವಲು ಪ್ರಮುಖ ಕಾರಣರಾದ ಅನರ್ಹ ಶಾಸಕರಿಗೆ ಇತ್ತ ಸಚಿವ ಸ್ಥಾನವೂ ಇಲ್ಲ. ಅತ್ತ ಕೋರ್ಟ್ ತೀರ್ಪು ಬಂದಿಲ್ಲ. ಹೀಗಾಗಿ ಇವರು ಯಾವ ದಡಕ್ಕೂ ಸೇರದೇ ಮಧ್ಯದಲ್ಲೇ ನಿಂತುಕೊಂಡು ದಿಕ್ಕು ತೋಚದಂತೆ ಆಗಿದ್ದಾರೆ. ಆದರೆ ಇದೀಗ ಅವರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಒಂದು ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ. ಹೌದಯ ಅದೇನಪ್ಪ ಅಂದರೆ, ಸುಪ್ರೀಂ ಕೋರ್ಟ್ ತೀರ್ಪಿಗೂ ಮೊದಲೇ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

ಅನರ್ಹ ಶಾಸಕರಿಗೆ ಇದೀಗ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ. ಯಾಕೆಂದರೆ ಈಗಾಗಲೇ ಸ್ಪೀಕರ್ ಅವರಿಂದ ಅನರ್ಹತೆಗೆ ಒಳಗಾದ ಇವರು ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಪರವಾದ ತೀರ್ಪು ಬರಬಹುದು ಎಂದು ಕಾಯುತ್ತಿದ್ದಾರೆ. ಹೀಗಾಗಿ ಸ್ಪೀಕರ್ ಆದೇಶವನ್ನು ಪ್ರಶ್ನೆ ಮಾಡಿ, ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗಧಿಪಡಿಸುವಂತೆ ಅನರ್ಹ ಶಾಸಕರು ನ್ಯಾ, ಎನ್.ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು. ಆದರೆ ಅವರು ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದಿದ್ದರು.

ಸುಪ್ರೀಂ ಕೋರ್ಟ್ ರಿಜಿಸ್ಟಾರ್ ಈ ವಾರ ಲಿಸ್ಟ್ ಆಗೋ ಸಾಧ್ಯತೆ ಇದೆ. ಇನ್ನೇನು ಒಂದೆರಡು ವಾರದಲ್ಲಿಯೇ ಇದರ ಬಗ್ಗೆ ವಿಚಾರಣೆ ಆರಂಭ ಆಗಬಹುದು. ನಂತರ ಸಂಬಧಂಪಟ್ಟವರಿಗೆ ನೋಟೀಸ್ ಕೂಡ ನೀಡಲಾಗುವುದು. ವಿಚಾರಣೆ ದಿನದಂಏ ಹಾಜರಾಗಲು ಕಾಲಾವಖಾಶವನ್ನೂ ನೀಡಲಾಗುವುದು ಎನ್ನಲಾಗಿದೆ. ವಿಚಾರಣೆಗೆ ಸುಪ್ರೀಂ ಕೋರ್ಟ್ ಯೆಸ್ ಅಂದಿರೋದಕ್ಕೆ ಸದ್ಯಕ್ಕೆ ಅನರ್ಹ ಶಾಸಕರು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತ ಮತ್ತಂದು ಕಡೆ ಈ ಅನರ್ಹ ಶಾಸಕರು ರೂಪಿಸಿದ ಪ್ಲಾನ್ ಏನೆಂದರೆ, ಕೋರ್ಟ್ ತೀರ್ಪು ಬರೋತನಕ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ. ಹೌದು. ಈ ಕುರಿತು  ಚುನಾವಣಾ ಆಯೋಗಕ್ಕೆ ಪತ್ರ ಬರೆದಿರೋ 17 ಅನರ್ಹ ಶಾಸಕರು, ಬಚಾವಾಗುವ ತಂತ್ರ ರೂಪಿಸಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಹಿಂದೆ ಒಮ್ಮೆ ಅನರ್ಹ ಶಾಸಕರು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಆದರೆ ಕಳೆದ ಮಂಗಳವಾರವಷ್ಟೇ ತ್ರಿಸದಸ್ಯ ಪೀಠ ಅನರ್ಹರ ತುರ್ತು ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅನರ್ಹ ಶಾಸಕರು ಇದೀಗ ನಿರಾಳರಾಗಿದ್ದಾರೆ.


Find out more: