ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿಯೇ ಇದೀಗ ವಾರ್ ಅಂಡ್ ಪೀಸ್ ಪುಸ್ತಕದ ಬಗ್ಗೆ ಚರ್ಚೆ ಆಗುತ್ತಿದೆ. ಅದೂ ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಬಗ್ಗೆ. ಇದರ ಹಿಂದಿನ ರಸಹ್ಯವನ್ನು ಹುಡುಕಿಕೊಂಡು ಹೊರಟರೆ ಒಂದು ರೋಚಕ ಕತೆಯೇ ತೆರೆದುಕೊಳ್ಳುತ್ತಿದೆ. ಹಾಗಾದರೆ ನಡೆದಿದ್ದಾದರೂ ಏನು? ಜನರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿರೋದಾದರೂ ಏನನ್ನು ಅನ್ನೋದು ಇಲ್ಲಿದೆ ನೋಡಿ.

ಹೌದು ಜನರು ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ವಾರ್ ಅಂಡ್ ಪೀಸ್ ಎನ್ನುವ ಪುಸ್ತಕವನನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ? ಎಂದು ಪ್ರಶ್ನಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ ಕೆಲವರು ಪುಸ್ತಕದ ಫೋಟೊವನ್ನು ತೆಗೆದು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಅಸಲಿಗೆ ನಡೆದಿದ್ದೆ ಬೇರೆ ನೋಡಿ. ಇವರು ಪ್ರತಿಕ್ರಿಯೆ ಮಾಡುತ್ತಿರೋದೇ ಬೇರೆಯದಕ್ಕೆ ಅನ್ನೋದು ಮಾತ್ರ ಸತ್ಯ.


ನಡೆದಿದ್ದಾದ್ರೂ ಏನು?

2018ರಲ್ಲಿ ಒಂದು ಸಂಘರ್ಷ ನಡೆದಿತ್ತು. ಅದೇ ಕೊರೆಗಾಂವ್ ಸಂಘರ್ಷ. ಈ ಕುರಿತು ಕಳೆದ ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಆ ಪ್ರಕರಣದ ಆರೋಪಿ ಬೇರೆ ಯಾರೂ ಅಲ್ಲ ಅದು ವೆರ್ನಾನ್ ಗೊನ್ಸಾಲ್ವೆಸ್. ಇವರಿಗೆ ನ್ಯಾಯಮೂರ್ತಿ ಸಾರಂಗ್ ಕೋತ್ವಾಲ್ ಅವರು ಒಂದು ಪ್ರಶ್ನೆ ಕೇಳುತ್ತಾರೆ. ಅದೇನೆಂದರೆ, ವಾರ್ ಅಂಡ್ ಪೀಸ್ ಪುಸ್ತಕ, ಸಿಡಿ ಮೊದಲಾದ ಆಕ್ಷೇಪಾರ್ಹ ವಸ್ತುಗಳನ್ನು ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದೀರಿ ಅನ್ನೋದೇ ಆ ಪ್ರಶ್ನೆ.

ವಾರ್ ಅಂಡ್ ಪೀಸ್ ಅನ್ನೋದು ಲಿಯೋ ಟಾಲ್ ಸ್ಟಾಯ್ ಅವರದ್ದೇ ಎಂದು ತಿಳಿದುಕೊಂಡು ತಪ್ಪಾಗಿ ವರದಿ ಮಾಡಿದವು. ಇದನ್ನೇ ನಂಬಿಕೊಂಡ ಒಂದು ವರ್ಗ ನ್ಯಾಯಾದೀಶರ ಮೇಲೆ ಇಲ್ಲ ಸಲ್ಲದನ್ನು ಬರೆದರು. ನ್ಯಾಯಾದೀಶ್ ಸ್ಥಾನಕ್ಕೆ ಗೌರವವನ್ನೂ ಕೊಡದೇ ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ವಾರ್ ಅಂಡ್ ಪೀಸ್ ಕೃತಿಯ ಬಗ್ಗೆ ಗೊತ್ತಿಲ್ಲ ಎಂದರೆ ಅವನೆಂಥ್ ನ್ಯಾಯಾದೀಶ ಎಂದು ಹೀಯಾಳಿಸಿದರು.

ಆದರೆ ಸತ್ಯವೇನು ಗೊತ್ತಾ? ಬುಧವಾರ ನ್ಯಾಯಮೂರ್ತಿ ಉಲ್ಲೇಖಿಸಿದ ಪುಸ್ತಕ ಎಲ್ಲರೂ ತಿಳಿದುಕೊಂಡಂತೆ ಲಿಯೋ ಟಾಲ್ ಸ್ಟಾಯ್ ಅವರದ್ದಲ್ಲ. ಬದಲಾಗಿ ವಾರ್ ಅಂಡ್ ಪೀಸ್ ಇನ್ ಜಂಗಲ್‌ಮಹಲ್: ಪೀಪಲ್, ಸ್ಟೇಟ್ ಅಂಡ್ ಮಾವೋಯಿಸ್ಟ್ ಎಂಬುದು. ಈ ಪುಸ್ತಕದ ಸಂಪಾದಕರು ಬಿಸ್ವಜಿತ್ ರಾಯ್. ಆದರೆ ಮಾಧ್ಯಮಗಳು ತಾವು ದಾರಿ ತಪ್ಪಿಸುವುದಲ್ಲದೇ ದೇಶದ ಜನರನ್ನೇ ದಾರಿ ತಪ್ಪಿಸಿದ್ದವು.


Find out more: