ಮೋಟಾರ್ ವಾಹನನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸೆಪ್ಟೆಂಬರ್ 1 ರಿಂದ ಇದನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರ ಆಗಸ್ಟ್ 30ರಂದು ವಿಶೇಷ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಿದೆ. ಅದಕ್ಕೆ ತಕ್ಕಂತೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಗೆಜೆಟ್ ಮೂಲಕ ಇನ್ನೂ ಅಧಿಸೂಚನೆ ಹೊರಡಿಸದೇ ಇರುವುದು ಇದೀಗ ಮತ್ತಷ್ಟು ಗೊಂದಲಕ್ಕೆ ಹಾಗೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಲ್ಲದೇ ಇಲ್ಲೊಂದು ಪ್ರಶ್ನೆಗೂ ಕಾಡುತ್ತಿದೆ. ಹೌದು ರಾಜ್ಯ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಅಧಿಸೂಚನೆ ಹೊರಡಿಸದೇ ಕರ್ನಾಟಕ ರಾಜ್ಯದಲ್ಲಿಯೂ ಭಾರೀ ಮೊತ್ತದ ದಂಡ ವಿಧಿಸೋಕೆ ಅವಕಾಶ ಇದೆಯಾ ಅನ್ನೋ ಪ್ರಶ್ನೆ ಇದೀಗ ಎದರಾಗಿದೆ. ಆದರೆ ಅತ್ತ ಟ್ರಾಫಿಕ್ ಪೊಲೀಸರು ಮಾತ್ರ ರಾಜ್ಯ ಸೆರ್ಕಾರದ ಯಾವುದೇ ಅಧಿಸೂಚನೆಗೆ ಕಾಯದೇ ತಮಗೆ ಮನಬಂದಂತೆ ವಾಹನಚಾಲಕರನ್ನು ಹಿಡಿದು ದಂಢ ವಿಧಿಸುತ್ತಿದ್ದಾರೆ.
ಆದರೆ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಆಗಸ್ಟ್ 9ರಂದು ಗೆಜೆಟ್ ಹೊರಡಿಸಿದೆ. ಅಲ್ಲದೇ ನಂತರದ ದಿನಗಳಲ್ಲಿ ಅಂದರೆ ಆಗಸ್ಟ್ 30ರಂದು ಅಧಿಸೂಚನೆಯನ್ನೂ ಹೊರಡಿಸಿದೆ. ಇದರ ಅರ್ಥ ಈ ಕಾಯ್ದೆ ಸೆಪ್ಟೆಂಬರ್ ಒಂದರಿಂದ ಇಡೀ ದೇಶದಾದ್ಯಂತ ಜಾರಿಗೆ ಬಂದಂತಾಗಿದೆ ಎನ್ನುತ್ತಾರೆ. ಹೀಗಾಗಿ ರಾಜ್ಯದ ಟ್ರಾಫಿಕ್ ಪೊಲೀಸರು ಸೆಪ್ಟೆಂಬರ್ ಒಂದಿರಂದಲೇ ಹೊಸ ಕಾಯ್ದೆ ಅಡಿಯಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದರು.
ಆದರೆ ಇಲ್ಲಿ ಕಾನೂನು ತೊಡಕು ಏನಪ್ಪ ಅಂದರೆ, ಈ ಹಿಂದೆ ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳನ್ನು ರದ್ದುಪಡಿಸಿ, ರಾಜ್ಯ ಸರ್ಕಾರವು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಬೇಕು. ಆದರೆ ಆ ಕೆಲಸ ಇನ್ನೂ ಆಗಿಯೇ ಇಲ್ಲ. ಆದರೆ ಸಾರಿಗೆ ಇಲಾಖೆ ಇಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ ಎನ್ನಲಾಗಿದೆ.
ಮತ್ತೊಂದು ವಿಷ್ಯ ಏನಪ್ಪ ಅಂದರೆ, ರಾಜ್ಯ ಸರ್ಕಾರ ಇನ್ನೂ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಆದರೆ, ನಮ್ಮ ಟ್ರಾಫಿಕ್ ಪೊಲೀಸರು ಹೊಸನಿಯಮದಂತೆಯೇ ದಂಡ ವಿಧಿಸೋಕೆ ಆರಂಭ ಮಾಡಿದ್ದಾರೆ. ಹೌದು,ಕುಡಿದು ವಾಹನ ಚಲಾಯಿಸಿದ ಅಪರಾಧಕ್ಕೆ ಇಬ್ಬರಿಗೆ ಇಂಡಿ ಜೆಎಂಎಫ್‌ಸಿ ನ್ಯಾಯಾಲಯವು ಆ. 23ರಂದೇ ತಲಾ ₹ 10 ಸಾವಿರ ದಂಡ ವಿಧಿಸಿತ್ತು.ರತನ್ ತಳವಾರ ಮತ್ತು ಬಳ್ಳೊಳ್ಳಿಯ ನಜೀರ್ ಕೊಕರೆ ಎಂಬುವರೇ ಕುಡಿದು ಸಿಕಕ್ಕಿಬಿದ್ದ ವಾಹನ ಚಾಲಕರಾಗಿದ್ದರು.