ಕರ್ನಾಟಕದಲ್ಲಿ ಕಾವೇರಿ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಅದರಲ್ಲಿ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಈ ಅಭಿಯಾನಕ್ಕೆ ತಮ್ಮ ಜೀವನದ ಹನ್ನರಡು ವರ್ಷಗಳನ್ನು ತೆಗೆದು ಇಟ್ಟಿದ್ದಾರೆ. ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ ಅನೇಕ ಇತರೇ ಇಂಡಸ್ಟ್ರೀ ನಟ ನಟಿಯರೂ ಬೆಂಬಲ ಸೂಚಿಸುತ್ತಿದ್ದಾರೆ ಅಲ್ಲದೇ ತಮ್ಮ ಕೈಲಾದಷ್ಟು ಹಣವನ್ನು ಡೊನೇಟ್ ಮಾಡುತ್ತಿದ್ದಾರೆ.


ಈ ಸಾಲಿಗೆ ಇದೀಗ ಬಾಲಿವುಡ್ ನಟಿ ಕಂಗನಾ ರಾಣಾವತ್ ಸೇರ್ಪಡೆ ಆಗಿದ್ದಾರೆ. ಹೌದು ಪರಿಸರ ಕಾಳಜಿಯ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ನದಿ ಉಳಿಸಿ ಹಾಗೂ ಕಾವೇರಿ ಕೂಗು ವಿಚಾರದಲ್ಲಿ ಸಕ್ರೀಯವಾಗಿ ಇದ್ದಾರೆ. ಇಂತಹ ಪ್ರಮುಖ ವಿಚಾರಗಳ ಬಗ್ಗೆ ಕಾಳಜಿ ತೋರದಿರುವ ಭಾರತೀಯ ಸೆಲೆಬ್ರಿಟಿಗಳನ್ನು ಕಂಗನಾ ರಾಣಾವತ್ ತರಾಟೆಗೆ ತೆಗೆದುಕೊಂಡಿದ್ದಾರೆ.


ಹೌದು ಕಂಗನಾ ರಾಣಾವತ್ ಅವರು ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ 42 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ ಒಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಜೀವನಾಡಿಗಳಾಗಿರುವ ನದಿಗಳು ನಶಿಸುವ ಹಂತಕ್ಕೆ ತಲುಪಿವೆ. ಚೆನ್ನೈನಲ್ಲಿ ತಲೆದೋರಿರುವ ಬರಗಾಲ ಒಂದು ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದರು. 


ಇಷ್ಟೇ ಅಲ್ಲದೇ ನಾವು ನದಿಗಳ  ಬಗ್ಗೆ ಕಾಳಜಿ ವಹಿಸಬೇಕು. ಲಿಯನಾರ್ಡೋ ಡಿ ಕ್ಯಾಪ್ರಿಯೋ ಅಮೆರಿಕಾದಲ್ಲಿದ್ದಾಗ್ಯೂ ಈ ಸಮಸ್ಯೆ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ನನ್ನ ದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕಾಳಜಿ ತೋರದಿದ್ದರೆ ನನಗೆ ನಾಚಿಕೆ ಆಗಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಇತರೆ ಭಾಲಿವುಡ್ ಸೆಲೆಬ್ರಿಟಿಇಗಳೂ ಇದೀಗ ಕಾವೇರಿ ನದಿಗಾಗಿ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬೆ ವ್ಯಕ್ತಪಡಿಸುತ್ತಾರೆ ಇಲ್ಲವೇ ಎಂದು ಖಾದು ನೋಡಬೇಕಿದೆ.


ಇಶಾ ಫೌಂಡೇಶನ್ ಕಾವೇರಿ ನದಿ ಪುನಶ್ಚೇತನಕ್ಕಾಗಿ ನದಿ ಪಾತ್ರದಲ್ಲಿ ಅರಣ್ಯ ಬೆಳೆಸುವ ಬಹುದೊಡ್ಡ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಕೈಜೋಡಿಸಿರುವ ಕಂಗನಾ, ಈಗಾಗಲೇ0 42 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ. ನಂತರ ಮಾತನಾಡಿದ ಅವರು, ಕಾವೇರಿ ನದಿ ಪಾತ್ರದಲ್ಲಿ ಗಿಡ ನೆಡಲು ಪ್ರತಿಯೊಬ್ಬರು ಒಂದು ಗಿಡಕ್ಕೆ 42 ರೂಪಾಯಿ ದೇಣಿಗೆ ಕೊಡುವ ಅಗತ್ಯವಿದೆ ಎಂದು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು. ಒಟ್ಟು ಒಂದು ಲಕ್ಷ ನದಿ ನೆಡೋಕೆ ಆರ್ಥಿಕ ಸಹಾಯ ಮಾಡಲು ಕಂಗನಾ ಮುಂದೆ ಬಂದಿದ್ದಾರೆ. ಇತರೆ ಸೆಲೆಬ್ರಿಟಿಗಳು ಕೈಜೋಡಿಸಬೇಕೆಂದೂ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.


Find out more: