ಇತ್ತೀಚೆಗೆ ಒಂದು ಸಿನಿಮಾ ರಿಲೀಸ್ ಆಗಿತ್ತು. ಅದರ ಹೆಸರು ಅರವಿ. ಇದು ಮಲಯಾಳಂ ಸಿನಿಮಾ. ಪಾರ್ವತಿ ಮೆನನ್ ಅವರು ನಟಿಸಿದ ಚಿತ್ರವಾಗಿತ್ತು. ಇಡೀ ಚಿತ್ರದ ಕೇಂದ್ರ ಬಿಂದು ಪಾರ್ವತಿ ಮೆನನ್ ಅವರ ಪಾತ್ರ. ಅಷ್ಟಕ್ಕೂ ಈ ಸಿನಿಮಾದ ಕಥೆ ಏನ ಅಂದರೆ, ಆ ಬಾಲಕಿಗೆ ಪೈಲಟ್ ಆಗಬೇಕು ಎನ್ನುವ ಕನಸಿರುತ್ತದೆ. ಹೀಗಾಗಿ ಅದಕ್ಕಾಗಿ ಆಕೆ ಏನೆಲ್ಲ ಮಾಡುತ್ತಾರೆ ಅನ್ನೋದು ಈ ಸಿನಿಮಾದ ಎಳೆ.


ಇದೀಗ ನಿಜ ಜೀವನದಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಹೌದು ವಾಣಿಜ್ಯ ವಿಮಾನದ ಪೈಲಟ್‌ ಆಗಿ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಈ ಸಾಧನೆ ಮಾಡಿದ್ದಾರೆ. ಹೌದು ಒಡಿಶಾದ ಅನುಪ್ರಿಯಾ ಮಧುಮಿತಾ ಅವರು ಈ ಸಾಧನೆ ಮಾಡಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಮಾವೋವಾದಿಗಳ ಭದ್ರಕೋಟೆ ಎನಿಸಿರುವ ರಾಜ್ಯ ಅಂದರೆ ಅದು ಒಡಿಶಾ. ಇಲ್ಲಿನ ಮಲ್ಕನ್‌ಗಿರಿ ಜಿಲ್ಲೆಗೆ ಸೇರಿದವಳು ಈ ಹುಡುಗಿ.


ಅನುಪ್ರಿಯಾ ಮದುಮಿತ ಅವರಿಗೆ 27 ವರ್ಷ ವಯಸ್ಸು. ಅವರು ತಮ್ಮ ಬಾಲ್ಯದ ಕನಸು ಅಂದರೆ ಪೈಲೆಟ್ ಆಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಮಧುಮಿತ ಅವರ ತಂದೆ ಪೊಲೀಸ್ ಕಾನ್ಸ್ಟೇಬಲ್. ಇದೀಗ ಅನುಪ್ರಿಯಾ ಅವರು ಇಂಡಿಗೋ ಏರ್‌ಲೈನ್ಸ್ ಸಹ ಪೈಲೆಟ್ ಆಗಿ ಆಯ್ಕೆ ಆಗಿದ್ದಾರೆ. ಈ ಕುರಿತು ಮಾತನಾಡಿದ ಹುಡಗಿಯ ತಾಯಿ ಹೇಳಿದ್ದೇನು ಗೊತ್ತಾ? 'ನಮ್ಮ ಮಗಳು ಕುಟುಂಬಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ' ಎಂದು ತಾಯಿ ಜಿಮ್ಜಾ ಯಾಶ್ಮಿನ್‌ ಸಂತಸ ವ್ಯಕ್ತಪಡಿಸಿದ್ದಾರೆ.


ಪೈಲೆಟ್ ತರಬೇತಿಗೆ ಹಣ ಹೊಂದಿಸುವುದು ತಂದೆಗೆ ಕಷ್ಟವಾದರೂ ಅವರು ತಮ್ಮ ಸಂಬಂಧಿಕರ ಹತ್ತಿರ ಸಹಾಯ ಪಡೆದು ಮಗಳನ್ನು ತರಬೇತಿ ಪಡೆಯಲು ಕಳುಹಿಸಿದ್ದರು. ಅಲ್ಲದೇ ಮಗಳು ಇಷ್ಟಪಟ್ಟ ಕ್ಷೇತ್ರದಲ್ಲಿಯೇ ಬೆಳೆಯಬೇಕು ಎಂದು ಅವರು ಬಯಸಿದ್ದರು. ಬಡತನವಿದ್ದರೂ ಮಗಳು ಕಂಡ ಕನಸಿಗೆ ಅವರ ತಂದೆ ತಾಯಿ ಯಾವತ್ತೂ ಅಡ್ಡಿ ಮಾಡಿರಲಿಲ್ಲ. ಕಂಡ ಕನಸನ್ನು ಅವರ ನನಸು ಮಾಡೋಕೆ ಸಹಾಯ ಮಾಡಿದ್ದಾರೆ.



ಇಷ್ಟೇ ಅಲ್ಲದೇ ಈ ಯುವತಿಯ ಸಾಧನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶ್ಲಾಘಿಸಿದ್ದಾರೆ. ಹೌದು, 'ಅನುಪ್ರಿಯಾ ಸಾಧನೆ ಬಗ್ಗೆ ಹೆಮ್ಮೆ ಇದೆ, ಅನೇಕ ಹೆಣ್ಣುಮಕ್ಕಳಿಗೆ ಇವರು ಮಾದರಿ' ಎಂದು ಹೇಳಿದ್ದಾರೆ. ಇನ್ನು ಬುಡಕಟ್ಟು ಮುಖಂಡ ಮತ್ತು ಒಡಿಶಾ ಆದಿವಾಸಿ ಕಲ್ಯಾಣ ಮಹಾಸಂಘದ ಅಧ್ಯಕ್ಷ ನಿರಂಜನ್‌ ಬಿಸಿ, ಕೂಡ ತಮ್ಮ ಸಮುದಾಯದ ಮಹಿಳೆಯ ಸಾಧನೆ ಬಗ್ಗೆ ಕೊಂಡಾಡಿದ್ದಾರೆ. 


Find out more: