ದುಬಾರಿ ಫೈನ್ ನಿಂದ ಸಾರ್ವಜನಿಕರು ನಿಜಕ್ಕೂ ಬೇಸತ್ತು ಹೋಗಿದ್ದಾರೆ. ಯಾಕೆಂದರೆ, ದೊಡ್ಡ ಮಟ್ಟದಲ್ಲಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದರೆ ಅಷ್ಟೇ ಕಥೆ. ಇರೋದನ್ನೆಲ್ಲ ಮಾರಿ ಕೊಡಬೇಕಾಗುತ್ತದೆ. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಫೈನ್ ಹಾಕ್ತಾ ಇರೋದಕ್ಕೆ ಇಡೀ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ನೂತನ ಸಂಚಾರಿ ನಿಮಯಗಳು ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರನ್ನು ಕಂಡರೆ ಬೆಚ್ಚಿ ಬೀಳುತ್ತಿದ್ದಾರೆ.
ಆದರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಆಂದ್ರ ಪೊಲೀಸರು ಒಂದು ಹೊಸ ಕ್ರಮವನ್ನು ಕೈಗೊಂಡಿದ್ದಾರೆ. ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಈ ಕ್ರಮವು ಅವರನ್ನು ಅಚ್ಚರಿಗೊಳಿಸಿದೆ. ಇಷ್ಟು ದಿನಗಳ ಕಾಲ ನಿಮಯವನ್ನು ಉಲ್ಲಂಘನೆ ಮಾಡಿ ಸಿಕ್ಕಿ ಬೀಳುತ್ತಿದ್ದವರನ್ನು ದುಬಾರಿ ದಂಡ ಹಾಕಿ ಶಾಕ್ ನೀಡುತ್ತಿದ್ದ ಟ್ರಾಫಿಕ್ ಪೊಲೀಸರು ಇದೀಗ, ವಾಹನ ಸವಾರರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹಾಗಾದರೆ ಆ ಅಚ್ಚರಿ ಏನು? ಅಂದರೆ ಹೆಲ್ಮೆಟ್ ಇಲ್ಲದೇ ಗಾಡಿ ಓಡಿಸಿದರೆ, ಅವರಿಂದ ದಂಡವನ್ನು ವಸೂಲಿ ಮಾಡಿ, ಸ್ಥಳದಲ್ಲಿಯೇ ಅವರಿಗೆ ಹೆಲ್ಮೆಟ್ ಖರೀದಿ ಮಾಡಿ ಕೊಡುತ್ತಿದ್ದಾರೆ. ಹೀಗೆ ವಾಹನ ಸವಾರರಿಗೆ ಸಹಾಯ ಆಗುವ ರೀತಿಯಲ್ಲಿ ಅವರು ವರ್ತಿಸುತ್ತಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿಯಲ್ಲಿ ಸೂಕ್ತ ದಾಖಲೆ ಇಲ್ಲದೇ ಸವಾರರಿಂದ ವಸೂಲಾಗುವ ದಂಡವನ್ನು ಸೂಕ್ತ ದಾಖಲೆ ಪಡೆಯಲು ಸಹಾಕಾರ ಮಾಡುತ್ತಿದ್ದಾರೆ.
ಆ ಮೂಲಕ ತಾವು ದಂಡವನ್ನು ಮಾತ್ರವಲ್ಲ ಇಂತಹ ಸಮಾಜ ಸೇವಾ ಕಾರ್ಯದಲ್ಲೂ ತೊಡಗುವ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ. ಪೊಲೀಸರು ಅಂದರೆ ಹೀಗಿರಬೇಕಪ್ಪ ಎಂದುಕೊಳ್ಳುತ್ತಿದ್ದಾರೆ ಜನರು. ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಈ ಕುರಿತಂತೆ ಹೈದರಾಬಾದ್ ಸಂಚಾರಿ ಪೊಲೀಸ್ ಉಪ ಆಯುಕ್ತರಾದ ದಿವ್ಯ ಚರಣ್ ರಾವ್ ಅವರು ಮಾತನಾಡಿದ್ದಾರೆ. ಅವರು ಹೇಳಿದ್ದೇನೆಂದರೆ, ಸಂಚಾರಿ ಪೊಲೀಸರ ಕುರಿತು ಜನರಲ್ಲಿ ತಪ್ಪು ಭಾವನೆ ಸೃಷ್ಟಿಯಾಗಿದೆ. ದುಬಾರಿ ಹಣ ಕಿತ್ತು ಜನರಿಂದ ಲೂಟಿ ಮಾಡುತ್ತಿದ್ದಾರೆ ಎಂದು ತಪ್ಪು ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ ಅವರಿಗೇ ತೊಂದರೆ. ದಂಡ ಮಾತ್ರವಲ್ಲದೇ ತಮ್ಮ ಸುರಕ್ಷತೆ ಕುರಿತು ಕೂಡ ಅವರು ಆಲೋಚಿಸಬೇಕು ಎಂದು ಹೇಳಿದರು. ಹೀಗಾಗಿಯೇ ನಾವು ಅವರ ಹಣದಲ್ಲಿ ಅವರಿಗೆ ಹೆಲ್ಮೆಟ್ ಮತ್ತು ದಾಖಲೆ ಒದಗಿಸುತ್ತಿದ್ದೇವೆ ಎಂದರು.