ನಿನ್ನೆ ಕರ್ನಾಟಕದ ಮಾದ್ಯಮಗಳು ದೇಶದಾದ್ಯಂತ ನಗೆಪಾಟಲಿಗೆ ಈಡಾದವು, ಕರ್ನಾಟಕದಲ್ಲಿ ಎಂಥಹ ಅಪ್ರಬುದ್ಧ ಮಾದ್ಯಮಗಳು ಇವೆ ಎನ್ನುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟವು. ಹೌದು ಇದು ಮೈಸೂರು ಪಾಕ್ ವಿಷಯಕ್ಕೆ ಸಂಬಂಧಿಸಿದ ಸುದ್ದಿ. ಹಾಗಾದರೆ ನಡೆದಿದ್ದಾದರೂ ಏನು? ಕರ್ನಾಟಕದ ಮಾದ್ಯಮಗಳು ಎಡವಿದ್ದಾದರೂ ಎಲ್ಲಿ ಅನ್ನೋದು ಇಲ್ಲಿದೆ ನೋಡಿ.


ಜಗತ್ತಿನಲ್ಲೇ ಪ್ರಸಿದ್ಧವಾಗಿರುವ ಕರ್ನಾಟಕದ ಮೈಸೂರು ಪಾಕ್‌ನ ಭೌಗೋಳಿಕ ಸೂಚ್ಯಂಕವನ್ನು ತಮಿಳುನಾಡು ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಈ ಮಹತ್ವದ ಗುರುತನ್ನು ತಮಿಳುನಾಡಿಗೆ ನೀಡಿದ್ದಾರೆ ಎಂದು ತಮಿಳುನಾಡಿನ ಅಂಕಣಕಾರ, ಲೇಖಕ ಆನಂದ್ ರಂಗನಾಥನ್ ಎನ್ನುವವರೊಬ್ಬರು ಟ್ವೀಟ್ ಮಾಡಿದ್ದರು. ಇದನ್ನೇ ನಂಬಿಕೊಂಡು ಕನ್ನಡದ ಮಾದ್ಯಮಗಳು ರಂಪಾಟ ಆರಂಭಿಸಿ ಬಿಟ್ಟಿದ್ದವು.


ಆನಂದ್ ರಂಗನಾಥನ್ ಅವರು ಮಾಡಿದ ಈ ಟ್ವೀಟ್ ಎಷ್ಟು ನಿಜ?ಎಷ್ಟು ಸುಳ್ಳು ಎನ್ನುವುದನ್ನೇ ಅರಿಯದೇ ಕ್‌ರಾಸ್ ಚೆಕ್ ಮಾಡದೇ ಇನ್ನೊಂದು ಆಯಾಮದಲ್ಲಿ ಅರ್ಥ ಪಡೆದು ದೊಡ್ಡ ಮಟ್ಟದ ಚರ್ಚೆಯೇ ನಡೆಸಿ ಬಿಟ್ಟವು. ಅಲ್ಲದೇ ಆನಂದ್ ರಂಗನಾಥನ್ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿ ಬಿಟ್ಟವು. ಹೀಗೆ ಆತುರಕ್ಕೆ ಬಿದ್ದ ಮಾಧ್ಯಮಗಳು ಕೂಡ ಅದರ ಸತ್ಯಾಸತ್ಯತೆ ಅರಿಯದೆ ನಮ್ಮ ರಾಜ್ಯದ ಹೆಮ್ಮೆಯ ಮೈಸೂರ್ ಪಾಕ್‌ನ ಹಕ್ಕನ್ನು ತಮಿಳುನಾಡು ಕಸಿದುಕೊಂಡಿವೆ ಎಂದು ಡಂಗುರ ಸಾರಿದವು.


ಅಸಲಿಗೆ ವಿಷಯ ಏನು ಗೊತ್ತಾ? ರಂಗರಾಜನ್ ಅವರು ಮಾಡಿದ ಟ್ವೀಟ್ ತಮಾಷೆಯಿಂದ ಕೂಡಿತ್ತು.  ಮೈಸೂರು ಪಾಕ್ ನಮ್ಮ ರಾಜ್ಯದ ಹೆಗ್ಗರುತುಗಳಲ್ಲಿ ಒಂದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಅವರು ಸುಮ್ಮನೇ ತಮಾಷೆಗೆ ವ್ಯಂಗ್ಯಕ್ಕೆ ಈ ರೀತಿ ಹಾಕಿದ್ದರು. ಹೀಗಿರುವಾಗ ಅದಕ್ಕೆ ಭೌಗೋಳಿಕ ಸೂಚ್ಯಂಕ ನೀಡಲು ಯಾರು ಸಮಿತಿ ರಚಿಸಿರುವುದು? ಒಂದು ವೇಳೆ ಕೇಂದ್ರ ಸರ್ಕಾರ ಸಮಿತಿ ರಚಿಸಿದ್ದರೆ ಯಾವಾಗ ರಚಿಸಿದ್ದು? ಭೌಗೋಳಿಕ ಸೂಚ್ಯಂಕ ನೀಡುವಂತಹ ಸಮಿತಿಯನ್ನು ರಾಜ್ಯಗಳ ಅಭಿಪ್ರಾಯವಿಲ್ಲದೆ ರಚಿಸಲು ಹೇಗೆ ಸಾಧ್ಯ? ಎನ್ನುವು ಕನಿಷ್ಟ ಮಟ್ಟದ ಪ್ರಶ್ನೆಗೆ ಪ್ರಶ್ನೆಗೆ ಉತ್ತರವನ್ನೂ ಕಂಡು ಕೊಳ್ಳದೇ ದಾರಿ ತಪ್ಪಿದವು ಕನ್ನಡದ ಮಾದ್ಯಮಗಳು.


ಆನಂದ್ ಅವರಲ್ಲದೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದವು. ತಮಿಳು ನಾಡು ಮೈಸೂರ್ ಪಾಕ್ ಮೇಲೂ ಕಣ್ಣುಹಾಕಿದೆ ಎಂದು ವಾಹಿನಿಗಳು ವರದಿ ಮಾಡಿದ್ದವು. ಹೀಗಾಗಿ ಇದರಿಂದ ಸಿಟ್ಟಿಗೆದ್ದ ಟ್ವಿಟ್ಟರಿಗರೂ ಆನಂದ್ ಮತ್ತು ನಿರ್ಮಲಾ ವಿರುದ್ಧ ಮುಗಿಬಿದ್ದಿದ್ದರು. ಆನಂದ್ ರಂಗನಾಥನ್ ತಮ್ಮ ಟ್ವೀಟ್‌ಗೆ ಸ್ಪಷ್ಟನೆ ನೀಡಿದ್ದರೂ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತು. ಕೊನೆಗೆ ಸತ್ಯ ಗೊತ್ತಾದ ಮೇಲೆ ಕನ್ನಡದ ಮಾದ್ಯಮಗಳ ಮಾನ ಹರಾಜು ಆಗಿ ಹೋಗಿತ್ತು.


Find out more: