ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿರುವ ಪ್ರಮಾಣವನ್ನು ರಾಜ್ಯ ಸರ್ಕಾರ ತಗ್ಗಿಸಲು ಮುಂದಾಗಿದೆ. ಆದರೆ ಕಾಯ್ದೆಯ ಪ್ರಕಾರ ಕೇವಲ ನಾಲ್ಕೈದು ಪ್ರಕರಣಗಳನ್ನು ಮಾತ್ರವೇ ದಂಡದ ಪ್ರಮಾಣ ತಗ್ಗಿಸಬಹುದು ಎನ್ನಲಾಗುತ್ತಿದೆ. ಆದರೆ ಉಳಿದ ಯಾವುದೇ ಪ್ರಕರಣಗಳಲ್ಲಿ ದಂಡದವನ್ನು ಕಡಿಮೆ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ ಎನ್ನಲಾಗುತ್ತಿದೆ. ಹೌದು. ಹೀಗಾಗಿ ದಂಡ ಇಳಿಸುವ ಚಿಂತನೆ ನಡೆಸಿದ್ದ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. 


ಈ ಹಿಂದೆ ನಡೆದಿದ್ದೇನು?

ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆಗೆ ಸೆಕ್ಷನ್‌ 200ರಡಿ ತಿದ್ದುಪಡಿ ತಂದಿದೆ. ಇದರಿಂದ ಜನರು ಭಾರೀ ಸಂಕಷ್ಟಕ್ಕೆ ಈಡಾಗಿದ್ದಾಎರೆ. ಇದರಲ್ಲಿ ಒಟ್ಟಾರೆ 24 ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿತ್ತು. ಇದರ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಖಾಯ್ದೆಯನ್ನೇ ಯಥಾವತ್ತಾಗಿ ಜಾರಿಗೊಳಿಸಿದ ರಾಜ್ಯ ಸರಕಾರ ಕಳೆದ ಸೆ. 3ರಂದು ಅಧಿಸೂಚನೆ ಹೊರಡಿಸಿತ್ತು. ನಂತರ ರಾಜ್ಯದಲ್ಲೂ ಇದು ಜಾರಿ ಆಗಿತ್ತು. 


ನಂತರ ನಡೆದಿದ್ದೇನು? 

ಈ ಕಾಯ್ದೆ ವಿರುದ್ಧ ವಾಹನ ಸವಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ ದಂಡದ ಪ್ರಮಾಣ ಇಳಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ತಿದ್ದುಪಡಿ ನಿಯಮದಲ್ಲಿ ಐದು ಪ್ರಕರಣಗಳಿಗೆ ಮಾತ್ರ ದಂಡದ ಮೊತ್ತ ಪರಿಷ್ಕರಿಸುವ ಅಧಿಕಾರ ಇದೆ ಎನ್ನಲಾಗಿದೆ. ಹೀಗಾಗಿ ಕಾನೂನಿನ ತೊಡಕು ಇದಕ್ಕೆ ಎದುರಾಗಿದೆ.


ಆದರೆ ಗುಜರಾತ್ ಸರ್ಕಾರ 11 ಪ್ರಕರಣಗಳ ದಂಡವನ್ನು ಕಡಿಮೆ ಮಾಡಿದೆ. ಆ ಮಾದರಿಯನ್ನೇ ಕರ್ನಾಟಕ ರಾಜ್ಯವೂ ಒಂದುವೇಳೆ ಅನುಸರಿಸಬೇಕಾದರೆ ಕರ್ನಾಟಕ ಇನ್ನೂ ಕನಿಷ್ಠ 6 ಪ್ರಕರಣಗಳಲ್ಲಿ ಕೇಂದ್ರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಇದನ್ನು ಕಾನೂನು ಇಲಾಖೆಗೆ ಸಾರಿಗೆ ಇಲಾಖೆಗೆ ತಿಳಿಸಿದೆ. 
 
ಯಾವುದರ ಬದಲಾವಣೆಗೆ ಅವಕಾಶ ?

1. ಚಾಲನೆ ವೇಳೆ ಮೊಬೈಲ್‌ ಬಳಕೆ
2. ವೇಗವಾಗಿ ವಾಹನ ಚಾಲನೆ
3. ಸಾರಿಗೆ ಸೂಚನೆಯನ್ನು ಪಾಲಿಸದಿರುವುದು
4. ಡೆಂಜರಸ್ ಡ್ರೈವಿಂಗ್
5. ರಿಜಿಸ್ಟರೇಶನ್ ಇಲ್ಲದ ವಾಹನ ಚಾಲನೆ


Find out more: