ಬೆಂಗಳೂರು: ಇಲ್ಲಿದೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಅದು ಯಾರಿಂದ ಗೊತ್ತಾ?. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೂ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. yes, ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯಕ್ತ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಮಲ್ಲಿಗೆ ನಗರಿ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬರುವ ಜನರಿಗೆ ವಿಶೇಷ ಟೂರ್ ಪ್ಯಾಕೇಜ್ ಲಭ್ಯವಾಗಿದೆ. ಹಾಗಾಗಿ ಪ್ರಯಾಣಿಕರು ಕೆಎಸ್ಆರ್ಟಿಸಿ ಈ ಟೂರ್ ಪ್ಯಾಕೇಜ್ ಬಳಸಿಕೊಂಡು ಇಡೀ ಮೈಸುರು ಜೊತೆಗೆ ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.
ಮೈಸೂರು ದಸರಾ ಪ್ರಯುಕ್ತ ಜನರಿಗಾಗಿ ಈ ಪ್ಯಾಕೇಜ್ ಘೋಷಿಸಿದ್ದೇವೆ. ಇದೇ ಸೆಪ್ಟೆಂಬರ್ 29ರಿಂದ ಮುಂದಿನ ಅಕ್ಟೋಬರ್ 13ರವರೆಗೂ ಈ ಪ್ಯಾಕೇಜ್ ಇರಲಿದೆ. ಪ್ರವಾಸಿಗರು ಈ ಪ್ಯಾಕೇಜ್ ಮೂಲಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ವಯಸ್ಕರಿಗೆ, ಹಿರಿಯ ವಯಸ್ಸಿನವರಿಗೆ, ಮಕ್ಕಳಿಗೆ ಪ್ಯಾಕೇಜ್ನಲ್ಲಿ ಪ್ರತ್ಯೇಕ ದರ ನಿಗದಿ ಮಾಡಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಕೆಎಸ್ಆರ್ಟಿಸಿ ಸಾಮಾನ್ಯ ಬಸ್ನಿಂದ ಹಿಡಿದು ಐರಾವತ ಕ್ಲಬ್ ಕ್ಲಾಸ್ ವಾಹನಗಳ ಪ್ಯಾಕೇಜ್ ಕೂಡ ಇದೆ. ಒಂದು ದಿನದ ಪ್ಯಾಕೇಜ್ ಇದಾಗಿದ್ದ, ನಾವು ತೆಗೆದುಕೊಳ್ಳುವ ಪ್ಯಾಕೇಜ್ ಮೇಲೆ ಹಣ ನೀಡಬೇಕಾಗುತ್ತದೆ.ಇನ್ನು ಗಿರಿ ದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಎಂಬ ಮೂರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ. ಪ್ರವಾಸಿಗರು ಈ ಪ್ಯಾಕೇಜ್‌ಗಳ ಮೂಲಕ ವಿವಿಧ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ದಸರಾ ಪ್ರಯುಕ್ತ ಘೋಷಿಸಿರುವ ಪ್ಯಾಕೇಜ್ಗಳು ಉತ್ತಮವಾಗಿವೆ.
ನಾಡಹಬ್ಬ ದಸರಾಗೆ ಮೈಸೂರು ತೆರೆದುಕೊಳ್ಳುತ್ತಿದೆ. ಈಗಾಗಲೇ ಹಲವು ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಯುವ ಸಂಭ್ರಮದ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ಯುವ ಸಂಭ್ರಮವು ಸೆ.17ರಿಂದ 26ರವರೆಗೆ ಒಟ್ಟು ಹತ್ತು ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.