ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಹೈಡ್ರಾಮಗಳೆಲ್ಲ ನಡೆದ ಮೇಲೆ ಕೊನೆಗೂ ಸಮ್ಮಿಶ್ರ ಸರ್ಕಾರ ಉರುಳಿತು. 17 ಶಾಸಕರು ರಾಜೀನಾಮೆ ನೀಡಿದ್ದರು. ಕೊನೆಗೂ ಅನರ್ಹರಾಗಿ  ಸುಪ್ರಿಂಕೋರ್ಟ್ ಕದತಟ್ಟಿದ್ದರು. ಪ್ರಸ್ತುತ ಈ ವಿಷಯದ ಚರ್ಚೆಯನ್ನು ಸುಪ್ರಿಂಕೋರ್ಟ್ ನಲ್ಲಿಯೇ ಮುಂದುವರೆಯುತ್ತಿದೆ. ಇದೆಲ್ಲದರ ಮದ್ಯೆ ಖಾಲಿಯಿರುವ ಕ್ಷೇತ್ರದಲ್ಲಿ ಚುನಾವಣಾ ನಡೆಸಲು ಚುನಾವಣಾ ಆಯೋಗ ಚಿಂತಿಸಿದೆ.
 
 ಆದ್ದರಿಂದ ಮೂರು ಪಕ್ಷಗಳು ಇಲ್ಲಿಯವರೆಗೂ ಟಿಟ್ವರ್ ನಲ್ಲಿ ಕಾಳೆಯುತ್ತಿರುವುದು ಬಿಟ್ಟು, ಪ್ರಸ್ತುತ ನಡೆಯುವ ಚುನಾವಣೆಗೆ ಸದ್ದಿಲ್ಲದಂತೆ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ದಪಡಿಸಿಕೊಳ್ಳುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬವೂ ಸೇರಿದಂತೆ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟಕ್ಕಿಳಿದಿದೆ. 


ಪ್ರವಾಹಪೀಡಿತ ಪ್ರದೇಶಗಳ ಹಾನಿ, ಪುನರ್ವಸತಿ ಸ್ಥಿತಿಗತಿ ಅಧ್ಯಯನಕ್ಕೆ 4 ತಂಡಗಳನ್ನು ರಚಿಸಿದ್ದ ಕಾಂಗ್ರೆಸ್‌ ಆ ತಂಡಗಳಿಂದ ವರದಿ ಪಡೆದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಮೂಲಕ ಚುರುಕು ಮುಟ್ಟಿಸಿದೆ. ಪ್ರಸ್ತುತ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ ಅಖಾಡಕ್ಕಿಳಿದಿದೆ. ಜತೆಗೆ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಮೂಲಕ ಸರಕಾರದ ನಿದ್ರಾಭಗ್ನ ಮಾಡಿದೆ.


ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಪಕ್ಷದ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟಿಸುವ ಮೂಲಕ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ಇದಕ್ಕೂ ಮುನ್ನ ಸಿಎಲ್‌ಪಿ ಸಭೆ ನಡೆಸಿ ಸರಕಾರದ ವಿರುದ್ಧ ಪ್ರದೇಶವಾರು ಹೋರಾಟ ನಡೆಸುವ ನಿರ್ಣಯ ಕೈಗೊಂಡಿದ್ದಾರೆ. ಸೆಪ್ಟೆಂಬರ್ 24ರಂದು ಬೆಳಗಾವಿಯಲ್ಲಿಧರಣಿ ನಡೆಯಲಿದೆ. ರಾಜ್ಯದಲ್ಲಿಹಿಂದೆಂದೂ ಕಾಣದಷ್ಟು ಭೀಕರ ಪ್ರವಾಹ ಬಂದದ್ದರಿಂದ ದೊಡ್ಡ ನಷ್ಟವಾಗಿದೆ. ಈ ನಡುವೆಯೂ ಕೇಂದ್ರ ಸರಕಾರ ಪರಿಹಾರ ಘೋಷಿಸಿಲ್ಲ ಎಂದು ಕಿಡಿಕಾರಿದ್ದಾರೆ. ಹಾಗಾಗಿ ಬೀದಿಗಿಳಿದಿರುವ ಕಾಂಗ್ರೆಸ್‌ ಪಕ್ಷ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದೆ.


ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಕೆಲ ದಿನಗಳಿಂದ ಸರಕಾರದ ವಿರುದ್ಧ ಕಟು ವಾಗ್ದಾಳಿ ನಡೆಸುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ, ಪುರ್ನಸತಿ, ಸಂತ್ರಸ್ತರ ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾ, ಮಳೆ ಇಲ್ಲದ 50 ತಾಲೂಕುಗಳಲ್ಲಿಬರ ಘೋಷಣೆ ಮಾಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.


Find out more: