ಮೊಳಕಾಲ್ಮೂರು: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಕಳೆದ 20 ವರ್ಷಗಳಿಂದಲೂ ಬರಗಾಲದಿಂದ ತತ್ತರಿಸಿಹೋಗಿದೆ. ಮಲೆನಾಡು, ಕೊಡಗು, ಕರಾವಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು, ಪ್ರವಾಹದ ಉಂಟಾಗಿದೆ, ಆದರೆ ಇದಕ್ಕೆ ವಿಚಿತ್ರವಾಗಿ ಮದ್ಯ ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮಳೆ ಬಾರದೆ ಬೆಳೆ ಬೆಳೆಯದೆ ರೈತರು ಮುಗಿಲತ್ತ ಮುಖಮಾಡಿ ಕುಳಿತಿದ್ದಾರೆ. 


ಪ್ರತಿವರ್ಷ ಅಲ್ಪಸ್ವಲ್ಪ ಮಳೆಯಾದರು ಆಗುತ್ತಿತ್ತು, ಆದರೆ ಈ ವರ್ಷ ಮಳೆಯೆ ಕಣದಂತಾಗಿದೆ. ರೈತರು ಕಂಗಾಲಾಗಿದ್ದಾರೆ. ಮಳೆ ಬರುತ್ತಿಲ್ಲ, ಸಾಲ ಮಾಡಿ ಶೇಂಗಾ, ಹತ್ತಿ, ಜೋಳ, ಬೀಜಗಳನ್ನು ತಂದಿದ್ದಾರೆ. ಮೊದಲ ಮಳೆಗೆ ಬಿತ್ತನೆ ಮಾಡಿದ್ದಾರೆ, ಆದರೆ ಇದೀಗ ಮಳೆ ಬಾರದಿರುವುದು ಜೊತೆಗೆ ಬೆಳೆ ಚಿಗುರೊಡೆಯದಿರುವುದು ಎಲ್ಲವು ರೈತರನ್ನು ದಿಕ್ಕು ತೋಚದ ಹಾಗೆ ಮಾಡಿವೆ. ಸಾಲದೆಂಬದೇ ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ಅತಿ ಹಿಂದುಳಿದ ಪ್ರದೇಶ.


ಜನರಿಗೆ ಉದ್ಯೋಗವಿಲ್ಲದೆ ವಲಸೆ: ಮೊಳಕಾಲ್ಮೂರು, ರಾಂಪುರ ಸುತ್ತಮುತ್ತಲಿನ ಜನತೆಯೂ ಕೃಷಿ ಮಾಡಲು ಮಳೆಯಿಲ್ಲದೆ, ಕೆಲಸ ಮಾಡಲು ಉದ್ಯೋಗವಿಲ್ಲದೆ, ಮಂಗಳೂರು, ಬೆಂಗಳೂರು ನಗರಗಳಿಗೆ ವಲಸೆ ಹೋಗಿ ಜೀವನ ನಡೆಸುತ್ತಿದ್ದಾರೆ. 
ಐಟಿಐ ಶಿಕ್ಷಣ ಮುಗಿಸಿ ಸೀದಾ ಬೆಂಗಳೂರಲ್ಲೆ ಕೆಲಸ: ತಾಲ್ಲೂಕ್ ಹಾಗೂ ರಾಂಪುರದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮುಗಿಸಿ ಫಿಟ್ಟರ್, ಎಲೆಕ್ಟ್ರೀಶನ್, ಇತರೆ ಕೈಗಾರಿಕಾ ತರಬೇತಿಗಳನ್ನು ಪಡೆದು ನೇರವಾಗಿ ಬೆಂಗಳೂರಿಗೆ ತೆರಳುತಿದ್ದಾರೆ ಉದ್ಯೋಗವರಸಿ. ಉದ್ಯೋಗ ಸಿಕ್ಕರು ಸಹ ರೂಂ ಬಾಡಿಗೆ, ಊಟ, ಈಗೆ ಎಲ್ಲಾ ಖರ್ಚನ್ನು ಸೇರಿಸಿದರೆ ಅವರು ಕೊಡುವ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಕೇವಲ ಬ್ಯಾಚುಲರ್ ಲೈಫ್‌ಗೆ ಪರಿಸ್ಥಿತಿ ಈಗಾದರೆ ಇನ್ನು ಮದುವೆ, ಮಕ್ಕಳು ಆದ ಮೇಲೆ ಪರಿಸ್ಥಿತಿ ಹೇಗಿರುತ್ತದೆ ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು. 


ಇಲ್ಲಿನ ಜನರಿಗೆ ಅಗತ್ಯವಾಗಿ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗಿದೆ. ಉದ್ಯೋಗ ಸೃಷ್ಠಿಸಲು ಕೈಗಾರಿಗೆಗಳ ಸ್ಥಾಪನೆ ಅನಿವಾರ್ಯವಾಗಿದೆ. ಇಂತಹ ಯುವಜನತೆಗೆ ಒಂದು ಉದ್ಯೋಗ ನೀಡಲು ಮೊಳಕಾಲ್ಮೂರು ತಾಲ್ಲೂಕ್ ಮಟ್ಟದಲ್ಲೆಯೇ ಕೈಗಾರಿಕೆಗಳು ಸ್ಥಾಪನೆಯಾದರೆ ನಮ್ಮ ಸಂಪನ್ಮೂಲ ನಮ್ಮಲ್ಲಿಯೇ ಇರುತ್ತದೆ.


Find out more: