ಬೆಂಗಳೂರು: ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕ್ರಿಕೇಟರ್ ದ್ರಾವಿಡ್ ಗೂ ಬಿಜೆಪಿಯ ರಾಜ್ಯ ಕಾರ್ಯದ್ಯಕ್ಷ ಜೆ. ಪಿ ನಡ್ಡಾಗೂ ಏನು ಸಂಬಂಧ. ಅವರೇಕೆ ಭೇಟಿಯಾಗಿದ್ದಾರೆ ಎಂಬುದು ಜನರ ಕುತೂಹಲವಾಗಿದೆ. 
 
 ಬೆಂಗಳೂರಿನಲ್ಲಿರುವ ರಾಹುಲ್ ದ್ರಾವಿಡ್ ನಿವಾಸಕ್ಕೆ ಪ್ರಮುಖ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ ಅವರು ಆರ್ಟಿಕಲ್ 370 ರದ್ದು ಕುರಿತಾಗಿ ಸಮಾಲೋಚನೆ ನಡೆಸಿದ್ದಾರೆ. ರಾಹುಲ್ ದ್ರಾವಿಡ್ ಜೊತೆ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರನ್ನೂ ಭೇಟಿಯಾದ ಜೆ.ಪಿ ನಡ್ಡಾ ಇದೇ ವಿಚಾರವಾಗಿ ಸಮಾಲೋಚನೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ. ರಾಷ್ಟ್ರದ ಹೃದಯಭಾಗ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರ ಚರ್ಚೆಗೆ ಗ್ರಾಸವಾಗಿದೆ.  ಕೇರಳದ ಐ.ಎ.ಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾಶ್ಮೀರ ವಿಚಾರ ಸೇರಿದಂತೆ ಕೇಂದ್ರ ಸರಕಾರದ ಕೆಲವೊಂದು ಆಡಳಿತಾತ್ಮಕ ನಿರ್ಧಾರಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದರು.


‘ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಗೆ ನೆಹರು ಕಾರಣ’: ಇತಿಹಾಸ ಕೆದಕಿ ಮಾತಲ್ಲೇ ತಿವಿದ ಶಾ

ಈ ಹಿನ್ನೆಲೆಯಲ್ಲಿ ಆರ್ಟಿಕಲ್ 370 ರದ್ದು ನಿರ್ಧಾರದ ಕುರಿತಾಗಿ ಗಣ್ಯರ ಜೊತೆಗೆ ಮಾತುಕತೆ ಹಾಗೂ ಸಮಾಲೋಚನಾ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿದೆ. ಇದರ ಭಾಗವಾಗಿಯೇ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಹಾಗೂ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಭೇಟಿ ಮಾಡಲಾಗಿದೆ. 370 ರದ್ದು ಕುರಿತಾದ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಅವರಿಗೆ ನೀಡಲಾಯಿತು. 370ಜೆ ರದ್ದು ಕುರಿತಾಗಿ ಕಾಂಗ್ರೇಸ್ ಹಾಗೂ ಕೆಲವು ಸಂಘಟನೆಗಳು ಭಾರೀ ವಿರೋಧ ಮಾಡಿದ್ದವು. ಇದರಿಂದ  ಕಾಶ್ಮೀರದಲ್ಲಿ ಮತ್ತೇ ಭಾರೀ ಹೈ ಅಲರ್ಟ್ ಘೋಷಿಸಿದ್ದಾರೆ. ಆದ್ದರಿಂದ ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯುವ ಪರಿಸ್ಥಿತಿ ಉದ್ಭವಿಸಿದೆ. 


Find out more: