ಬಳ್ಳಾರಿ: ರಾಜ್ಯದಲ್ಲಿ ಪ್ರಸ್ತುತವಿರುವ ಜಿಲ್ಲೆಗಳು 30. ಆದರೆ ಕಳೆದೊಂದು ವಾರದಿಂದ ಬಳ್ಳಾರಿಯಿಂದ ಇನ್ನೂಂದು ವಿಜಯನಗರ ಜಿಲ್ಲೆ ಸೃಷ್ಠಿಯ ಕುರಿತು ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಈ ವಿಷಯದ ಕುರಿತು ಬಿಜೆಪಿ ಶಾಸಕರೇ  ರಾಜೀನಾಮೆ ನೀಡುವ ಕುರಿತು ಮಾತನಾಡಿರುವುದು  ಪ್ರಸ್ತುತ ಮುಖ್ಯಮಂತ್ರಿ ಗೆ ತಲೆನೋವಾಗಿ ಪರಿಣಮಿಸಿದೆ. ಬಳ್ಳಾರಿಯನ್ನು ಪ್ರತ್ಯೇಕಿಸಿ ವಿಜಯನಗರ ಜಿಲ್ಲೆಯನ್ನಾಗಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ರಮಕ್ಕೆ ಆಡಳಿತರೂಢ ಪಕ್ಷದ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲೆ ವಿಭಜಿಸಿದರೆ ರಾಜೀನಾಮೆ ಕೊಡುವುದಾಗಿ ಬಿಜೆಪಿ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಎಚ್ಚರಿಸಿದ್ದಾರೆ.


ಶನಿವಾರ  ಈವಿಚಾರವಾಗಿ ಮಾತನಾಡಿದ ಅವರು, ಬಳ್ಳಾರಿಯನ್ನು ಪ್ರತಿನಿಧಿಸುವ ನಾಲ್ಕು ಬಿಜೆಪಿ ಶಾಸಕರಿದ್ದು, ಯಾರಿಗೂ ಜಿಲ್ಲೆ ವಿಭಜಿಸುವ ಸರ್ಕಾರದ ಕ್ರಮಕ್ಕೆ ಒಪ್ಪಿಗೆ ಇಲ್ಲ. ಅನರ್ಹ ಶಾಸಕ ಆನಂದ್ ಸಿಂಗ್ ಅವರ ಮನವಿಗೆ ಯಡಿಯೂರಪ್ಪ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಸಂಪುಟ ಚರ್ಚೆಯಲ್ಲಿ ವಿಭಜನೆಯ ಪ್ರಸ್ತಾಪ ಬೇಡ ಎಂದಿದ್ದಾರೆ. ಅತೃಪ್ತ ಶಾಸಕರ ಆನಂದ್ ಸಿಂಗ್, ಜಿಂದಾಲ್ ವಿಚಾರಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಳ್ಳಾರಿ ಜಿಲ್ಲೆಯ ವಿಭಜನೆ ಬಗ್ಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾತನಾಡಿರಲಿಲ್ಲ. ಆದರೀಗ ಸರ್ಕಾರ ಜಿಲ್ಲೆಯ 5ತಾಲೂಕುಗಳನ್ನು ವಿಭಾಗಿಸಿ ವಿಜಯನಗರ ಜಿಲ್ಲೆ ರಚನೆಗೆ ಆತುರದಲ್ಲಿ  ಯಾವುದೇ ನಿರ್ಧಾರ ಕೈಗೊಳ್ಳಬಾರದು. ಸಂಪುಟದ ಮುಂದೆ ಜಿಲ್ಲಾ ವಿಭಜನೆಯ ಪ್ರಸ್ತಾಪ ನಡೆಸಬಾರದೆಂದು ಆಗ್ರಹಿಸಿದರು.


ಗಣಿನಾಡು ಬಳ್ಳಾರಿಯನ್ನು  ವಿಭಜಿಸಿ ವಿಜಯನಗರ ಜಿಲ್ಲಾ ರಚನೆಗೆ ಜಿಲ್ಲೆಯ ಜನತೆಯೂ ಒಪ್ಪಿಗೆ ಸೂಚಿಸಿಲ್ಲ. ನಮ್ಮೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂಬಂಧ ಚರ್ಚಿಸಬೇಕು ಎಂದು ಸೋಮಶೇಖರ್ ರೆಡ್ಡಿ ಮನವಿ ಮಾಡಿದರು. ರಾಜೀನಾಮೆ ನೀಡಬೇಕಾದಿತು. ಕೊಪ್ಪಳ ಜಿಲ್ಲೆ ರಚನೆಯಾಗಿ ಸಾಕಷ್ಟು ವರ್ಷಗಳು ಕಳೆದರೂ ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ಅಲ್ಲಿ ನಡೆದಿಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ನಮ್ಮೊಂದಿಗೆ ಚರ್ಚಿಸದೇ ಯಾವುದೇ ನಿರ್ಧಾರ ಪ್ರಕಟಿಸಬಾರದು. ಒಂದು ವೇಳೆ ಹಾಗೆ ಮಾಡಿದಲ್ಲಿ ಶಾಸಕ ಸ್ಥಾನಕ್ಕೆ ನನ್ನೊಂದಿಗೆ ಹಲವು ಶಾಸಕರು ರಾಜೀನಾಮೆ ನೀಡಬೇಕಾದೀತು ಎಂದು ಸರ್ಕಾರಕ್ಕೆ ಸೋಮಶೇಖರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.




Find out more: