ರಾಜ್ಯ ಕಾಂಗ್ರೇಸ್ ನಲ್ಲಿ ಪ್ರಸ್ತುತ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ನಡೆದ ಮಾರಾಮಾರಿಯೇ ಕಾರಣ. ಕಾಂಗ್ರೆಸ್ ಮುಖಂಡರ ನಡುವಿನ ಮನಸ್ಥಾಪ ಒಳ ಬೇಗುದಿ ಬಹಿರಂಗಕ್ಕೆ ಬಿದ್ದಿದ್ದು ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆಂದು ಕರೆದಿದ್ದ ಸಭೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ತಿರುಗಿ ಮಧ್ಯದಲ್ಲಿ ಏನೇನೋ ನಡೆದಿದೆಯಂತೆ. 


ಕೆಎಚ್ ಮುನಿಯಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ನೀನು ಯಾವ ಸೀಮೆ ನಾಯಕ ಎಂದು ಪ್ರಶ್ನಿಸುತ್ತಿದ್ದ ಅಂತೆಯೇ ಹೊಡೆಯುವ ರೀತಿಯಲ್ಲಿ ಸಿದ್ದರಾಮಯ್ಯ ಎದ್ದುನಿಂತರು ಸಿದ್ದರಾಮಯ್ಯ ತಮ್ಮ ವಿರುದ್ಧ ಎತ್ತಿದ್ದನ್ನು ಕಂಡು ಮುನಿಯಪ್ಪ ಕಣ್ಣೀರು ತೆರೆದಿದ್ದಾರೆ. ಆಗ ಸುತ್ತಲಿದ್ದ ಮುಖಂಡರು ಮುನಿಯಪ್ಪ ಅವರನ್ನು ಸುತ್ತುವರೆದು ಸಂತೈಸಿದರು ಎಂದು  ಮೂಲಗಳು ತಿಳಿಸಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಮುಂದಿಟ್ಟುಕೊಂಡು ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ರಾಜ್ಯಸಭೆ ಮಾಜಿ ಸದಸ್ಯ ಬಿ ಕೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರ ನಡುವೆ ಮಾತಿನ ಜಟಾಪಟಿ ನಡೆದಿದೆ. ಜಟಾಪಟಿ ತಾರಕಕ್ಕೇರಿ ಏಕವಚನಕ್ಕೆ ತಿರುಗಿದ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹರಸಾಹಸಪಟ್ಟು ಪರಿಸ್ಥಿತಿ ನಿಭಾಯಿಸಿದ್ದಾರೆ ಅಂತೆ.


ಎರಡು ಬದಿ ಅವರು ಪರಸ್ಪರ ಏಕವಚನದಲ್ಲಿ ನಿಂದಿಸಿದ್ದು ಆಕ್ರೋಶ ವಾಗ್ವಾದ ಹೆಚ್ಚಾಗಲು ಕಾರಣವಾಗಿತ್ತು. ಪ್ರಮುಖ ಮುಖಂಡರೇ ಕೆಸರೆರಚಾಟದಲ್ಲಿ ತೊಡಗಿದ್ದ ನ್ನು ಗಮನಿಸಿ ವೇಣುಗೋಪಾಲ್ ತಾವು ತಕ್ಷಣವೇ ದೆಹಲಿಗೆ ತೆರಳಬೇಕಿದೆ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿ ನಿರ್ಧಾರಿಸಿ, ಸಭೆ ಕೈಗೊಂಡ ವಿಚಾರಗಳ ಬಗ್ಗೆ ದೆಹಲಿ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಹೇಳಿ ತರಾತುರಿಯಲ್ಲಿ ಹೊರಟುಹೋದರು. ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ರಾಮಲಿಂಗಾರೆಡ್ಡಿ ಸಭೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪರಮೇಶ್ವರ್ ಇತ್ತೀಚಿಗೆ ತಮ್ಮನ್ನು ಪಕ್ಷದ ಯಾವುದೇ ಸಭೆಗೆ ಕರೆಯುತ್ತಿಲ್ಲ ನನ್ನನ್ನು ಬಿಟ್ಟು ಹೇಗೆ ಚುನಾವಣೆ ಮಾಡುತ್ತಾರೋ ನೋಡುತ್ತೇನೆ ಎಂದು ಹೇಳಿಕೊಂಡಿದ್ದರು. ತಮ್ಮ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮನಸ್ಥಾಪವಿಲ್ಲ ಎಂದು ಹೇಳಿದ್ದರು.


Find out more: