ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಎಂದು ಅಮೆರಿಕ ದಾದ್ಯಂತ ಹೌಡಿ ಮೋದಿ ಹವಾ ಭರ್ಜರಿಯಾಗಿಯೇ ಇತ್ತು. ಐವತ್ತು ಸಾವಿರ ಜನಸ್ತೋಮ ದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗೆ ಸಖತ್ ಶೈನ್ ಆಗಿದ್ದರು.  


ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ನಡೆಸಿಕೊಟ್ಟ ಹೌಡಿ ಮೋದಿ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿತ್ತು. ಇದರಿಂದ ಪ್ರೇರಿತರಾದ ಬೆಂಗಳೂರಿನ ಶಾಲಾ ಮಕ್ಕಳು “ಹೌಡಿ ಬೆಂಗಳೂರು”, “ಹೌಡಿ ಹೆಚ್‍ಎನ್‍ಹಳ್ಳಿ” ಎಂಬ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದರು. 


ನಗರದ ಹೆಚ್‍ಎನ್ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳ ನೂರಕ್ಕೂ ಹೆಚ್ಚು ಚಿಕ್ಕ ಮಕ್ಕಳು ಹಾಗೂ ನಾಗರೀಕರು ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಮಕ್ಕಳು ಗುಂಡಿಗಳು ಬಿದ್ದ ರಸ್ತೆಯ ನೀರಿನಲ್ಲಿ ಕಾಗದದ ದೋಣಿಗಳ ಆಟವಾಡಿದರು. ಪ್ರತಿ ದಿನ ಶಾಲೆಗೆ ಹೋಗಬೇಕಾದರೆ ಗುಂಡಿ, ಧೂಳು, ಮೋರಿಯ ದುರ್ನಾತದಿಂದ ನಾವೆಲ್ಲಾ ಬೇಸತ್ತಿದ್ದೇವೆ. ನಮ್ಮ ಸ್ಕೂಲ್ ವ್ಯಾನ್ ಒಂದು ಕಿ.ಮೀ ರಸ್ತೆ ದಾಟಲು ಮುಕ್ಕಾಲು ಗಂಟೆ ಬೇಕಾಗುತ್ತೆ. ಹೀಗಾಗಿ ಗ್ರ್ಯಾಂಡ್ ಫಾದರ್ ಮೋದಿಯವರು ನಮ್ಮ ರೋಡ್ ಸರಿಪಡಿಸಬೇಕೆಂದು ಕೇಳಿಕೊಂಡರು.


ಏನಿದು ಹೌಡಿ ಮೋದಿ ಕಾರ್ಯಕ್ರಮ ಗೊತ್ತಾ.  ನೈಋತ್ಯ ಅಮೆರಿಕದಲ್ಲಿ `ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ `ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು `ಹೌಡಿ ಮೋದಿ’ ಹೆಸರನ್ನಿಟ್ಟಿದ್ದರು. ಸೆಪ್ಟೆಂಬರ್ 22 ಭಾನುವಾರದಂದು ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಪ್ರಸ್ತುತ ಇದೀಗ ಹೌಡಿ ಬೆಂಗಳೂರು ಮೋದಿ ಗ್ರಾಂಡ್ ಫಾದರ್ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ


Find out more: