ನವದೆಹಲಿ: ನಾವಿಂದು ನಮ್ಮೂರಲ್ಲಿ ನೆಮ್ಮದಿಯಾಗಿದ್ದೇವೆ ಅಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಸೈನಿಕರು. ಗಡಿಯಲ್ಲಿ ಹಗಲಿರುಳು ಎನ್ನದೆ ಸುಡುವ ಬಿಸಿಲಿನಲ್ಲಿ, ಕೊರೆಯುವ ಮೈನಸ್ ಡಿಗ್ರಿಯ ಚಳಿಯಲ್ಲಿಯೂ ನಮಗಾಗಿ ಗಡಿ ಕಾಯುತ್ತಿದ್ದಾರೆ ಸೈನಿಕರು. ನಮಗಾಗಿ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿ ಸೈನಿಕರು ಕೇಂದ್ರ ಸರ್ಕಾರದ ಎದುರು ಕೆಲವೇ ಕೆಲವು ಬೇಡಿಕೆ ಗಳನ್ನಿಟ್ಟಿದ್ದರು. ಅದನ್ನೀಗ ಕೇಂದ್ರ ಸರ್ಕಾರ ಪೂರೈಸುವ ಮೂಲಕ ಭರ್ಜರಿ ಗಿಫ್ಟ್ ನೀಡಿದೆ. 

ಭಾರತೀಯ ಸೇನಾ ಸಿಬ್ಬಂದಿಗೆ ನೀಡುವ ಪರಿಹಾರದ ಮೊತ್ತವನ್ನು 2 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿ, ಸೈನಿಕರ ಬಹುದಿನಗಳ ಕನಸನ್ನು ನನಸಾಗಿಸಿದ್ದಾರೆ.  ಯುದ್ಧದಲ್ಲಿ ಹುತಾತ್ಮರಾದ ಸಿಬ್ಬಂದಿಯ ಕುಟುಂಬಕ್ಕೆ ಮತ್ತು ಗಾಯಗೊಂಡ ಸೇನಾ ಸಿಬ್ಬಂದಿಗೆ ನೀಡುವ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 2 ಲಕ್ಷ ರೂಪಾಯಿ ಇದ್ದ ಪರಿಹಾರದ ಮೊತ್ತವನ್ನು 8 ಲಕ್ಷ ರೂಪಾಯಿಗೆ ಹೆಚ್ಚಿಸುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನೆಯ ಬಹು ದಿನಗಳ ಆಸೆ ಈಡೇರಿಸಿದಂತಾಗಿದೆ.


ಎಲ್ಲಾ ವಿಭಾಗದ ಸಿಬ್ಬಂದಿಗೂ ಈ ಸೌಲಭ್ಯವನ್ನು ಒದಗಿಸಲಾಗಿದೆ. ಮಾಜಿ ಯೋಧರ ಕಲ್ಯಾಣ ಕೇಂದ್ರದ ಅಡಿಯಲ್ಲಿ ಬರುವ ಯುದ್ಧದಲ್ಲಿ ಗಾಯಗೊಂಡವರಿಗಾಗಿ ಇರುವ ಸೇನಾ ಕಲ್ಯಾಣ ನಿಧಿ (ಎಬಿಸಿಡಬ್ಲ್ಯುಎಫ್‌) ಯಿಂದ ನೀಡಲಾಗುವುದು ಅಂತಾ ರಕ್ಷಣಾ ಸಚಿವಾಲಯ ತಿಳಿಸಿದೆ. ಇದಷ್ಟೆ ಅಲ್ಲದೆ ಹೆಚ್ಚುವರಿ ಧನ ಸಹಾಯವನ್ನು ಲಿಬರಲೈಸಡ್​ ಫ್ಯಾಮಿಲಿ ಪೆನ್ಶನ್​, ಫೈನಾನ್ಶಿಯಲ್​ ಅಸಿಸ್ಟೆಂಟ್ ಫ್ರಾಮ್​ ಆರ್ಮಿ ಗ್ರೂಫ್​ ಇನ್ಸುರೆನ್ಸ್​, ಆರ್ಮಿ ವೆಲ್​ಫೇರ್​ ಫಂಡ್​ಗೂ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದುವರೆಗೂ ದೇಹದ ಶೇಕಡಾ 60 ಭಾಗದಷ್ಟು ಗಾಯ ಗೊಂಡವರು ಮತ್ತು ಹುತಾತ್ಮರಾದ ಸೇನಾ ಸಿಬ್ಬಂದಿ ಸಂಬಂಧಿಕರಿಗೆ ₹ 2 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಇದನ್ನೀಗ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ.


ಏಕಾಏಕಿ ನಾಲ್ಕು ಪಟ್ಟು ಹಣ ಅಂದರೆ 2 ಲಕ್ಷ ಇರುವುದು ಬರೋಬ್ಬರಿ 8 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸೈನಿಕರಿಗೆ, ಅವರ ಕುಟುಂಬ ಗಳಿಗೆ ಸೇರಿದಂತೆ ಇಡೀ ದೇಶಕ್ಕೆ ಹೆಮ್ಮೆಯಾಗಿದೆ.




Find out more: