ಕಲ್ಲಿನ ಅಂದ ನೋಡಲು ಹಂಪಿ ಸೂಕ್ತ ವಾದರೆ, ಪ್ರಕೃತಿಯ ಅಂದ ಸವಿಯಲು ಮಡಿಕೇರಿ ಸೈ. ಪ್ರಸ್ತುತ ಇದೀಗ ಇಡೀ ಮಡಿಕೇರಿಯೇ ನಾಡಹಬ್ಬ ದಸರಾ ಸಂಭ್ರಮ ದಲ್ಲಿದೆ.  ಇದೀಗ ಮಡಿಕೇರಿ‌ ಮಹಿಳಾ‌ ದಸರಾದಲ್ಲಿ ಮೂವರು ಮಹಾಲಕ್ಷ್ಮಿಯರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಸಖತ್ ಶೈನ್ ಆಗಿದ್ದಾರೆ. 


ನಿಜ, ಮಡಿಕೇರಿಯ ಗಾಂಧಿ ಮೈದಾನ ದಲ್ಲಿ ನಡೆಯುತ್ತಿರುವ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್, ಎಸ್ ಪಿ ಡಾ. ಸುಮನ್ ಡಿ ಪನ್ನೇಕರ್, ಸಿ ಇ ಓ ಲಕ್ಷ್ಮಿಪ್ರಿಯಾ ಪಾಲ್ಗೊಂಡಿದ್ದರು. 3 ಮಹಿಳಾ ಉನ್ನತಾಧಿಕಾರಿಗಳು ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ್ದು, ಮಹಿಳಾ ದಸರಾ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಸಾಂಪ್ರದಾಯಿಕ ಉಡುಪಿನ ಅಧಿಕಾರಿಗಳ ಫೋಟೊಗೆ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿದೆ. 


ಇನ್ನು ಸಚಿವ ಸುರೇಶ್ ಕುಮಾರ್ ಅವರು ಕೂಡಾ ಕೊಡಗಿನ ಈ ಮೂವರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ  ಕೊಡಗಿನಲ್ಲಿ ನಡೆದ ಮಹಿಳಾ ದಸರಾದಲ್ಲಿ ಭಾಗವಹಿಸಿದ್ದು ಹೀಗೆ ವಿಶಿಷ್ಟವಾಗಿ. ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನ-ಸಂಸ್ಕೃತಿಯೊಂದಿಗೆ ಬೆರೆಯುವ ರೀತಿ ಇದು. ಈ ಮೂರೂ   ಅಭಿನಂದನೆಗಳು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


ಕೊಡಗು ಮಂಜಿನ ನಾಡು ಎಂದೇ ಖ್ಯಾತಿ ಪಡೆದಿದ್ದು, ಕರುನಾಡಿನ ಗಡಿ ಪ್ರದೇಶವಾಗಿದೆ. ಸದಾ ಹಚ್ಚ ಹಸಿರಿನಿಂದ ಕೂಡಿದ್ದು,  ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿ  ಸಂಸ್ಕೃತಿ  ಸಂಪ್ರದಾಯಗಳೆಂದರೆ ಮೊದಲಿನಿಂದಲೂ ಹಾಗೆ. ಸಖತ್ ಕಲರ್ ಫುಲ್ ಆಗಿರುತ್ತವೆ. ಈ ಬಾರಿಯ ನಾಡಹಬ್ಬ ದಸರಾ ದಲ್ಲಿ  ಈ ಮೂವರು ಅಧಿಕಾರಿಗಳು ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಸ್ಕೃತಿಯ ಪ್ರತಾಕವಾಗಿದ್ದಾರೆ. ಪ್ರಸ್ತುತ ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದ್ದು, ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.


Find out more: