ನವದೆಹಲಿ: ಸ್ವಿಸ್ ಎಂಬ ಪದ ಕಿವಿಗೆ ಬೀಳುತ್ತಿದ್ದಂತೆ ಕಾಳಧನಿಕರು ಬಚ್ಚಿಟ್ಟಿರುವ ಕೋಟಿಗಟ್ಟಲೆ ಹಣ ನೆನಪಾಗುತ್ತದೆ. ಇದರ ಜೊತೆಗೆ ಭಾರತದ ಪರಿಸ್ಥಿತಿಗಳು ನೆನಪಾಗುತ್ತದೆ. ಒಂದು ಕಡೆ ಕಿತ್ತು ತಿನ್ನುತ್ತಿರುವ ಬಡತನದಲ್ಲಿ ಜನರು ಬೆಂದು ಸರ್ವನಾಶವಾಗುತ್ತಿದ್ದರೆ, ಇನ್ನೊಂದು ಕಡೆ ಎ ಸಿ ಕಾರಿನಲ್ಲಿ ತಿರುಗುತ್ತಾ ತಿಂದು ತೇಲುತ್ತಿರುವ  ಐಶಾರಾಮಿ ಜೀವನ ನಡೆಸುತ್ತಿವ ಜನರು. ಆದ್ದರಿಂದಲೇ ಭಾರತ ಸರ್ಕಾರ ಆ ಕಾಳ ಧನಿಕರ ಹುಡುಕಾಟದಲ್ಲಿ ನಿರಂತರವಾಗಿ ಮಗ್ನವಾಗಿದೆ.  ಸ್ವಿಜರ್ಲೆಂಡ್​ ಸರ್ಕಾರ ಕಾಳಧನಕ್ಕೆ ಸಂಬಂಧಿಸಿದ ಸ್ವಿಸ್​ ಬ್ಯಾಂಕ್​ ಅಕೌಂಟ್​ಗಳ ಮೊದಲ ಪಟ್ಟಿಯನ್ನು ಭಾರತ ಸರ್ಕಾರಕ್ಕೆ ನೀಡಿದ್ದು, ಉದ್ಯಮಿಗಳಿಗೆ ಹಾಗೂ ರಾಜಕಾರಣಿ ಗಳಿಗೆ ನಡುಕ ಶುರುವಾಗಿದೆ.


ಎರಡು ದೇಶಗಳ ಒಪ್ಪಂದದ ಪ್ರಕಾರ ಈ ಮಾಹಿತಿ ಹಂಚಿಕೊಳ್ಳ ಲಾಗಿದೆ. ಮುಂದಿನ ಹಂತದ ಮಾಹಿತಿ ಯನ್ನು 2020 ರ ಸೆಪ್ಟೆಂಬರ್ ವೇಳೆಗೆ ಹಂಚಿಕೊಳ್ಳಲಾಗುವುದು ಎಂದು ಸ್ವಿಜರ್ಲೆಂಡ್​ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಪ್ರಕಟಣೆ ತಿಳಿಸಿದೆ. ಮಾಹಿತಿಯ ಸ್ವಯಂಚಾಲಿತ ವಿನಿಮಯ ನಿಯಮದ ಅನ್ವಯ ಜಾಗತಿಕ ಗುಣ ಮಟ್ಟದ ಚೌಕಟ್ಟಿನ ವ್ಯಾಪ್ತಿಯಲ್ಲಿ ಸ್ವಿಜರ್ಲೆಂಡ್​ ಗುರುತಿಸಿರುವ 75 ರಾಷ್ಟ್ರಗಳ ಪೈಕಿ ಭಾರತ ಕೂಡ ಸೇರ್ಪಡೆಗೊಂಡ ಕಾರಣ ಇದೇ ಮೊದಲ ಸಲ ಭಾರತಕ್ಕೆ ಈ ಮಾಹಿತಿ ಸಿಕ್ಕಿದೆ.


2018 ರಲ್ಲಿ ಸಕ್ರಿಯ ವಾಗಿದ್ದ ಮತ್ತು ಮುಚ್ಚಿದ ಬ್ಯಾಂಕ್​ ಖಾತೆಗಳ ವಿವರಗಳನ್ನು ನೀಡಲಾಗಿದೆ. ಎಷ್ಟು ಖಾತೆಗಳ ವಿವರ ಹಂಚಿಕೊಳ್ಳಲಾಗಿದೆ ಎಂಬ ವಿವರಗಳನ್ನು ಅಡ್ಮಿನಿಸ್ಟ್ರೇಷನ್ ಪ್ರಕಟಣೆಯಲ್ಲಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಎಫ್​ಟಿಎ ಇಲ್ಲಿಯವರೆಗೂ 31 ಲಕ್ಷ ಹಣಕಾಸು ಖಾತೆ ವಿವರವನ್ನು ಪಾಲುದಾರ ರಾಷ್ಟ್ರಗಳೊಂದಿಗೆ ಹಾಗೂ 24 ಲಕ್ಷ ಖಾತೆಗಳ ವಿವರವನ್ನು ಹಂಚಿಕೊಂಡಿದೆ. ಕೊಟ್ಟಿರುವ ಮಾಹಿತಿ ಯಲ್ಲಿ ಉದ್ಯಮಿಗಳು, ಎಲ್ಲಾ ಪಕ್ಷದ ರಾಜಕಾರಣಿ ಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಸೇರಿದ್ದಾರೆ. ಕರ್ನಾಟಕದ ಕೆಲ ರಾಜಕಾರಣಿಗಳ ಹೆಸರಿರುವ ಸಂಭವವಿದೆ. ಮಾಹಿತಿ ಬಹಿರಂಗವಾದರೆ ಎಲ್ಲರ ಬಂಡವಾಳ ಬಯಲಾಗಲಿದೆ. ಆದ್ದರಿಂದಲೇ ಎಲ್ಲಿರಿಗೂ ಈಗ ಸ್ವಿಸ್ ಬ್ಯಾಂಕ್ ಮೇಲೆ ಅವರ ಕಣ್ಣು ನೆಟ್ಟಿದೆ. 

Find out more: