ಚೆನ್ನೈ: ವಿಶ್ವ ಮಟ್ಟದಲ್ಲಿ ಚಿರತೆಯಂತೆ ಮುನ್ನುಗ್ಗುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಕರಾವಳಿ ಪಟ್ಟಣ ಮಹಾಬಲಿಪುರಂನಲ್ಲಿ ನಡೆಯಲಿರುವ ಅನೌಪಚಾರಿಕ ಭೇಟಿಗೆ ಪೂರ್ವ ಸಿದ್ಧತೆಗಳೆಲ್ಲಾ ಪೂರ್ಣಗೊಂಡಿವೆ.
ಈಗಾಗಲೇ ಏಷ್ಯಾದ ಎರಡು ಬಲಿಷ್ಟ ದೇಶಗಳ ನಾಯಕರ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳ ಅಧಿಕಾರಿಗಳ ನಿಯೋಗದ ಸಭೆಯೂ ಇಲ್ಲಿ ನಡೆಯಲಿದೆ. ಪ್ರಧಾನಿ ನಮೋ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ನಿನ್ನೆ ಸಾಯಂಕಾಲ ಜೊತೆಯಾಗಿ ಇಲ್ಲಿನ ಯನೆಸ್ಕೋ ವಿಶ್ವಪಾರಂಪರಿಕ ತಾಣಗಳಿಗೆ ಜೊತೆಯಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಸಾದಾ ಉಡುಪಿನಲ್ಲಿ ಗಮನ ಸೆಳೆದರೆ ಪ್ರಧಾನಿ ಮೋದಿ ಅವರು ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಪಂಚೆ, ಬಿಳಿ ಅಂಗಿ ಮತ್ತು ಶಾಲು ತೊಟ್ಟುಕೊಂಡು ಗಮನ ಸೆಳೆದರು.
ಈ ಇಬ್ಬರೂ ನಾಯಕರ ಅನೌಪಚಾರಿಕ ಭೇಟಿಯ ವೇಳೆ ಭಯೋತ್ಪಾದನೆ, ವ್ಯಾಪಾರ ಮತ್ತು ಗಡಿ ಸಮರ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಆದರೆ ಇದೊಂದು ಅನೌಪಚಾರಿಕ ಭೇಟಿಯಾಗಿರುವ ಹಿನ್ನಲೆಯಲ್ಲಿ ಇಲ್ಲಿ ಯಾವುದೇ ರೀತಿಯ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕುವುದಿಲ್ಲ. ಆದರೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಬಾಂಧವ್ಯ ಮತ್ತು ವ್ಯಾಪಾರ ಅವಕಾಶಗಳನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ನಾಯಕರ ಈ ಅನೌಪಚಾರಿಕ ಭೇಟಿ ಒಂದಿ ವೇದಿಕೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಮೋ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಈ ಭೇಟಿ ಅನೌಪಚಾರಿಕ ಎಂದು ಹೇಳಲಾಗುತ್ತಿದೆ. ಆದರೆ ಈ ಭೇಟಿಯ ಹಿಂದೆ ಮತ್ತೊಂದು ವಿಶೇಷ ಪ್ಲಾನ್ ವೊಂದಿದೆ. ಅದು ಕಾಶ್ಮೀರ ವಿಚಾರವು ಸಹ ಆಗಿರಬಹುದು ಎಂದು ಊಹಿಸಲಾಗುತ್ತಿದೆ. ಮೋದಿ ಏನು ಮಾಡಿದರೂ ಸಹ ಸುಮ್ಮನೆ ಮಾಡುವುದಿಲ್ಲ. ಅದರ ಹಿಂದೆ ಮತ್ತೊಂದು ವಿಶೇಷ ಪ್ಲಾನ್ ಇದೆಯೆಂದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.