ಹೊಸಕೋಟೆ:  ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ತಮ್ಮ  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಯಾವ ನೈತಿಕತೆಯಿಂದ ಮತ್ತೊಮ್ಮೆ ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿದ್ದೀರಿ ? ಎಂದು ಜಿಲ್ಲಾ ಪಂಚಾಯತ್  ಸದಸ್ಯ ವಿ. ಪ್ರಸಾದ್ ಪ್ರಶ್ನಿಸಿದರು.
 
ನಂದಗುಡಿ ಹೋಬಳಿಯ ಹೆತ್ತಕ್ಕಿ ಹಾಗೂ ಶಿವನಾಪುರದಲ್ಲಿ ನಡೆದ ಹೊಸಕೋಟೆ ಉಪ ಚುನಾವಣಾ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಪದ್ಮಾವತಿ ಪರ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂಟಿಬಿ ನಾಗರಾಜ್‍ಗೆ 4 ಬಾರಿ ಪಕ್ಷದಿಂದ ಟಿಕೆಟ್ ನೀಡಿ 3 ಬಾರಿ ಶಾಸಕರಾಗಿ ನಿಗಮ ಮಂಡಳಿಗೆ ಅಧ್ಯಕ್ಷರಾಗಿ, ಸಮ್ಮಿಶ್ರ ಸರಕಾರದಲ್ಲಿ ವಸತಿ ಸಚಿವ ಹುದ್ದೆ ಅಲಂಕರಿಸಿದ್ದರೂ, ಅಧಿಕಾರದ ಲಾಲಸೆಗೆ ಬಲಿಯಾಗಿ ಪಕ್ಷಕ್ಕೆ ಹಾಗೂ ತಾಲೂಕಿನ ಮತದಾರರ ನಂಬಿಕೆಗೆ ದ್ರೋಹ ಬಗೆದು ರಾಜೀನಾಮೆ ಕೊಟ್ಟು, ಕೋಮುವಾದಿ ಬಿಜೆಪಿಯ ಸಖ್ಯ ಬೆಳೆಸಿ, ಮತ್ತೊಮ್ಮೆ ಚುನಾವಣೆಗೆ ಸನ್ನದ್ಧರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದು.

ಸಂಭಾವ್ಯ ಅಭ್ಯರ್ಥಿ ಪದ್ಮಾವತಿ ಸುರೇಶ್ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇತಿಹಾಸದಲ್ಲಿ ನಂದಗುಡಿ ಹೋಬಳಿ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದು, ಇಲ್ಲಿಂದಲೆ ಕಾಂಗ್ರೆಸ್ ಗೆಲುವಿನ ವಿಜಯ ಪತಾಕೆ ಹಾರಲಿದೆ ಎಂದರು. ಕಾಂಗ್ರೇಸ್ ನನ್ನ ಪಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಹೃದಯದಲ್ಲಿ ದ್ದಾರೆ, ನನ್ನ ಹೃದಯ ಸೀಳಿದರೆ ಸಿದ್ದರಾಮಯ್ಯ ನವರೇ ಕಾಣುತ್ತಾರೆ ಎಂದೆಲ್ಲಾ ಎಂಟಿಬಿ ನಾಗರಾಜ್‍ ಹೇಳಿದ್ದರು,

ಮರುದಿನವೇ ಮುಂಬೈ ಪ್ಲೈಟ್ ಹತ್ತುವ ಮೂಲಕ ಎಲ್ಲರಿಗೂ ಶಾಕ್  ನೀಡಿದ್ದರು ಎಂಟಿಬಿ. ಇದೀಗ ಸಿದ್ದರಾಮಯ್ಯ ಅವರೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಪ್ಲಾನ್ ವೊಂದನ್ನು ಸಿದ್ಧಪಡಿಸಿದ್ತಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರೇ ಸ್ವತಹ ಈ ಕ್ಷೇತ್ರದ ಚುನಾವಣೆಯತ್ತ  ಗಮನ ಹರಿಸಿ ದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಈ ಸಹ ಎಂಟಿಬಿ ನಾನೇ ಗೆಲ್ಲೋದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಕಣ ರಂಗೇರಿದ್ದು ಯಾರು ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.


Find out more: