ಕಳೆದೆರಡು ತಿಂಗಳ ಹಿಂದೆ ಸುಮಾರು 50 ಸಾವಿರ ಕ್ಕೂ ಹೆಚ್ಚು ಪೋಲೀಸರ ನಿಯೋಜನೆಯಿಂದ ಕಣಿವೆಯಲ್ಲಿ ಯುದ್ದ ನಡೆಯಬಹುದು ಎಂದು ಎಲ್ಲರೂ ಊಹಿಸಿದ್ದರು. ಆ ಊಹೆಯನ್ನು ತಪ್ಪಾಗಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370 ಮತ್ತು 35 ಎ ವಿಧಿಯನ್ನು ರದ್ದು ಪಡಿಸಿದ ಅಮಿತ್ ಶಾ ತಂಡಕ್ಕೆ ರಾಷ್ಟ್ರದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಎಐಸಿಸಿ ಮಾಜಿ ಅಧ್ಯಕ್ಷ ರಾದ ರಾಹುಲ್ ಗಾಂಧಿ ಇದನ್ನು ವಿರೋಧಿಸಿದ್ದರು. ಇದರಿಂದ ಕಾಶ್ಮೀರದಲ್ಲಿ ರಕ್ತ ಹರಿಯುತ್ತದೆ ಎಂದು ಅಂದು ಗುಡುಗಿದ್ದರು.  ಇದಕ್ಕೀಗ ಅಮಿತ್ ಶಾ ತಿರುಗೇಟು ನೀಡಿದ್ದಾರೆ. 


ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯ ಜಾಟ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಅಮಿತ್ ಶಾ 370ನೇ ವಿಧಿ ರದ್ಧತಿ ವಿರೋಧಿಸಿದ್ದ ಎನ್‌ಸಿಪಿ ಮತ್ತು ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರವೇ ಮಾಡಿದ್ದಾರೆ.  ಈ ಎರಡು ಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡುವ ನಿರ್ಧಾರವನ್ನು ವಿರೋಧಿಸಿದ್ದರು. ಕಾಶ್ಮೀರ್ ಮೇ ಖೂನ್ ಕೀ ನದಿಯಾಂ ಬಹ್ ಜಾಯೇಗೀ (ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯಲಿದೆ) ಎಂದಿದ್ದರು ರಾಹುಲ್ ಗಾಂಧಿ.

ಆದರೆ ಒಂದೇ ಒಂದು ಗುಂಡು ಹಾರಲಿಲ್ಲ. ಪ್ರಧಾನಿಯವರು ಇತ್ತೀಚೆಗೆ ವಿಶ್ವಸಂಸ್ಥೆಗೆ ಭೇಟಿ ಕೊಟ್ಟು ಬಂದಿದ್ದರು. ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಿರ್ಧಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಪಾಕಿಸ್ತಾನ ಮಾತ್ರ ಮೂಲೆಗುಂಪಾಗಿದೆ ಎಂದು ಶಾ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ದೇಶದ ಭದ್ರತೆ  ಬಲಗೊಂಡಿದೆ. ಇದು ಇಡೀ ಜಗತ್ತಿಗೇ  ಗೊತ್ತು. ಒಬ್ಬ ಯೋಧ ಹುತಾತ್ಮನಾದರೆ 10 ಶತ್ರುಗಳ ಹತ್ಯೆಯಾಗುತ್ತದೆ ಎಂದು ಪುಲ್ವಾಮ ಉಗ್ರ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್ ವಾಯುದಾಳಿ ನಡೆದದ್ದನ್ನು ಶಾ ಉಲ್ಲೇಖಿಸಿದ್ದಾರೆ. 1971ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಗೆದ್ದಾಗ  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮೊದಲು ಅಭಿನಂದಿಸಿದ್ದು ಅಟಲ್ ಬಿಹಾರಿ ವಾಜಪೇಯಿ. ನಾವು ಆಗ ವಿಪಕ್ಷದಲ್ಲಿದ್ದೆವು.  ಏಕೆಂದರೆ ನಮಗೆ ದೇಶ ಮೊದಲು ಎಂದರು.


Find out more: