ನವದೆಹಲಿ: ಕಳೆದ ಒಂದೂವರೆ ತಿಂಗಳಿಂದ ಅಯೋಧ್ಯೆ ರಾಮ ಭೂಮಿ ಮತ್ತು ಬಾಬರಿ ಮಸೀದಿ ವಿವಾದ ಕೊನೆಗೂ ವಾದ ಪ್ರತಿವಾದ ಗಳು ಮುಕ್ತಾಯವಾಗಿದ್ದು, ಇನ್ನೇನಿದ್ದರು ಸುಪ್ರೀಂ ಕೋರ್ಟ್ ನ ತೀರ್ಪಿಗಾಗಿ ಕಾಯಬೇಕಷ್ಟೆ. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಕಾಯ್ದಿರಿಸಿದ್ದಾರೆ. ಸದ್ಯ ಅಯೋಧ್ಯೆ ತೀರ್ಪು ಅನ್ನು ಮುಂದಿನ ನವೆಂಬರ್ 17ರ ಒಳಗೆ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ನಿವೃತ್ತಿ ಹೊಂದುವ ಮುನ್ನ 134 ವರ್ಷಗಳ ಹಳೇಯ ಶೀರ್ಷಿಕೆ ಮೊಕದ್ದಮೆಗೆ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪಂಚಪೀಠ ನ್ಯಾಯಾಧೀಶರನೊಳಗೊಂಡ ಸಂವಿಧಾನ ಪೀಠವು ಆಗಸ್ಟ್ 6 ರಂದು ದಿನನಿತ್ಯದ ವಿಚಾರಣೆಯನ್ನು ಪ್ರಾರಂಭಿಸಿತು. ಮತ್ತೆ ಸೋಮವಾರ, ಸುಪ್ರೀಂ ಕೋರ್ಟ್ ಒಂದು ವಾರದ ದಸರಾ ವಿರಾಮದ ಬಳಿಕ ವಿಚಾರಣೆಯನ್ನು ಪುನರಾರಂಭಿಸಿತು.


1989ರ ವರೆಗೆ ಹಿಂದೂಗಳಿಗೆ ಅಯೋಧ್ಯೆಯಲ್ಲಿನ ಭೂಮಿಗೆ ಯಾವುದೇ ಹಕ್ಕು ಇಲ್ಲ ಎಂದು ಕೇಳಿದ್ದರು. 2010ರಲ್ಲಿ ನಾಲ್ಕು ಸಿವಿಲ್​​ ಮೊಕದ್ದಮೆ ಅಡಿಯಲ್ಲಿ ಅಯೋಧ್ಯೆಯಲ್ಲಿನ 2.7 ಎಕರೆ ಭೂಮಿಯನ್ನು ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಭಜಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸುನ್ನಿ ವಕ್ಫ್ ಮಂಡಳಿ ಹಾಗೂ ನಿರ್ಮೋಹಿ ಅಖರಾ ಮತ್ತು ರಾಮ್ ಲಲ್ಲಾ ಅವರು ಹದಿನಾಲ್ಕು ಮೇಲ್ಮನವಿ ಸಲ್ಲಿಸಿದ್ದರು. ಅನೇಕ ಹಿಂದೂಗಳು ಈ ಭೂಮಿಯನ್ನು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ ಮತ್ತು ಪುರಾತನ ದೇವಾಲಯದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು.


16 ನೇ ಶತಮಾನದ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್‌ನಲ್ಲಿ ಬಲಪಂಥೀಯ ಕಾರ್ಯಕರ್ತರು ಧ್ವಂಸಗೊಳಿಸಿದರು. ಮಸೀದಿಯ ನಾಶ ದೇಶದಲ್ಲಿ ಗಲಭೆಗೆ ನಾಂದಿ ಹಾಡಿತ್ತು. ಹಿಂದುತ್ವ ಮತ್ತು ಮುಸ್ಲಿಂ ಪಂಥಗಳಲ್ಲಿ ಬಹು ಪ್ರಾಮುಖ್ಯತೆ ಪಡೆದಿರುವ ಈ ಪ್ರಕರಣದ ತೀರ್ಪಿಗಾಗಿ ಇಡೀ ರಾಷ್ಟ್ರವೇ ಕಾಯುತ್ತಿದೆ.  ಅದರಲ್ಲೂ ಪಕ್ಷಗಳು ಸಹ. ಏಕೆಂದರೆ ಅವರ ರಾಜಕೀಯವೂ ಸೇರಿರಬಹುದು ಎಂಬ ಲೆಕ್ಕಾಚಾರಗಳಿವೆ.


Find out more: