ಮೈಸೂರು: ಕಳೆದ ಎರಡು ತಿಂಗಳುಗಳ ಹಿಂದೆ 17 ಶಾಸಕರು ಸಲ್ಲಿಸಿದ ರಾಜೀನಾಮೆಯಿಂದ ದೋಸ್ತಿ ಸರ್ಕಾರ ಉರುಳಿತ್ತು. ಅತೃಪ್ತರೆಲ್ಲಾ ಮುಂಬೈ ಪ್ಲೈಟ್ ಹತ್ತುವ ಮೂಲಕ ಸಿದ್ದು, ಹೆಚ್ಡಿಕೆ ಗೆ ಬಾಯ್ ಬಾಯ್ ಮಾಡಿದ್ರು. ರಾಜೀನಾಮೆಗೆ ಕಾರಣ ಕೇಳಿದ್ರೆ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದಿದ್ದರು. ಸ್ಪೀಕರ್ ಇವರನ್ನು ಅನರ್ಹಗೊಳಿಸಿದರು. ಇದಕ್ಕಾಗಿ ಅನರ್ಹರು ಸುಪ್ರಿಂ ಮೆಟ್ಟಿಲೇರಿದ್ದಾರೆ.  ಇಷ್ಟೇಲ್ಲಾ ನಡೆದು ಇದೀಗ ಉಪಚುನಾವಣೆ ಎದುರಾಗಿದೆ. ಪ್ರಚಾರವು ನಡೆಯುತ್ತಿದೆ. ಇಂತಹ ಸಂದರ್ಭದಲ್ಲೀಗ  ಕೌರವ ಬಿಸಿ ಪಾಟೀಲ್ ದೋಸ್ತಿ ಸರ್ಕಾರ ಉರುಳಲು ಅಸಲೀ  ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 


ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಪತನಕ್ಕೆ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರ ಸ್ವಾಮಿ ಸೇರಿದಂತೆ ಕೆಲವರ ಸ್ವಪತ್ರಿಷ್ಠೆಯೇ ಕಾರಣವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅನರ್ಹ ಅತೃಪ್ತ ಶಾಸಕ ಬಿ.ಸಿ. ಪಾಟೀಲ್ ಇಂದು ಅಸಲೀ ಸತ್ಯ ಬಿಚ್ಚಿಟ್ಟಿದ್ದಾರೆ. ದೋಸ್ತಿ ಸರ್ಕಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸೇರಿದಂತೆ ನಾಲ್ಕೈದು ಮಂದಿಗೋಸ್ಕರ ಇತ್ತು. ಅಲ್ಲದೇ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿದರು. ಇದರಿಂದ ಬೇಸತ್ತು ನಾವೆಲ್ಲಾ ರಾಜೀನಾಮೆ ನೀಡಿದೆವು ಎಂದು ತಿಳಿಸಿದ್ದಾರೆ. 


ಸಮ್ಮಿಶ್ರ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ವೀರಶೈವ ಸಮುದಾಯದ ಶಾಸಕರನ್ನು ತುಳಿಯುವ ಪ್ರಯತ್ನ ನಡೆಯಿತು. ಹಾವೇರಿ ಜಿಲ್ಲೆಯಿಂದ ಸತತ ಮೂರನೇ ಬಾರಿ ಗೆದ್ದಿದ್ದ ಏಕೈಕ ಶಾಸಕನಾದ ನನಗೂ ಕೂಡ ಸೂಕ್ತ ಸ್ಥಾನಮಾನ ನೀಡದೇ ಅನ್ಯಾಯ ಮಾಡಲಾಯಿತು. ಅಲ್ಲದೇ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ವೀರಶೈವ ಸಮುದಾಯದವರಿಗೆ ಯಾವುದೇ ಸ್ಥಾನ ಮಾನ ನೀಡಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಖಾಡಕ್ಕೆ ಇಳಿಯುವ ಪ್ರತಿಯೊಬ್ಬ ಕುಸ್ತಿಪಟು ನಾನೇ ಗೆಲುತ್ತೇನೆ ಅಂದುಕೊಳ್ಳುತ್ತಾನೆ.ಅಖಾಡಕ್ಕೆ ಬಂದ ಮೇಲೆ ಯಾರು ಗೆಲುತ್ತಾರೆ ಅಥವಾ ಸೋಲುತ್ತಾರೆ ಅಂತ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಬಿ.ಸಿ.ಪಾಟೀಲ್, ಮಾರಾಟ, ಖರೀದಿ ಎಲ್ಲವೂ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತೆ ಹೊರತು ನಮಗೆ ಗೊತ್ತಿಲ್ಲ ಎಂದು ಹೇಳಿದರು.ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಹೊರ ಬೀಳುವ ವಿಶ್ವಾಸವಿದೆ ಎಂದರು.


Find out more: