ಬಿಗ್ ಬಾಸ್, ಆ ಹೆಸರಲ್ಲೇ ಒಂದು ಗತ್ತಿದೆ, ಮನರಂಜನೆಯಿದೆ, ಅರ್ಥಪೂರ್ಣ ಸಂದೇಶವಿದೆ. ಕನ್ನಡದ ಅತಿದೊಡ್ಡ ಮತ್ತು ಪ್ರಮುಖ ರಿಯಾಲಿಟಿ ಶೋ. ಇದೀಗ ಸೀಜನ್-7 ರನ್ ಆಗುತ್ತಿದೆ. ಈ ಶೋಗೆ ಬಿಗ್ ಬಿಗ್ ಅಕ್ಷರ ರಾಕ್ಷಸ ರವಿ ಬೆಳಗೆರೆ ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಸೇರಿದ್ದರು. ಆನಂತರ ಆರೋಗ್ಯ ಸಮಸ್ಯೆಯಿಂದ ಒಂದೇ ದಿನಕ್ಕೆ ಹೊರಬಂದು ಮತ್ತೇ ಅತಿಥಿಯಾಗಿ ಮನೆ ಸೇರಿದ್ದರು. 


ಆದರೆ ಇದೀಗ ಭಾನುವಾರವಷ್ಟೇ ಹೊರ ಬಂದಿದ್ದಾರೆ. ಮನೆಯ ಇತರ ಸದಸ್ಯರು ಒಲ್ಲದ ಮನಸ್ಸಿನಿಂದಲೇ ಅವರನ್ನು ಹೊರಗೆ ಕಳುಹಿಸಿದ್ದಾರೆ‌. ಒಂದೇ ವಾರಕ್ಕೆ ಎಲ್ಲರ ಮನಗೆದ್ದಿದ್ದ ರವಿ ಬೆಳೆಗೆರೆ ಪ್ರೇಕ್ಷಕರಿಗೂ ಇಷ್ಟವಾಗಿದ್ದರು. ಇನ್ನು ಎಲ್ಲಾ ಸದಸ್ಯರಿಗೂ ವಾರಕ್ಕಿಷ್ಟು ಎಂದು ಸಂಭಾವನೆ ಮಾತನಾಡಿ ಅಗ್ರಿಮೆಂಟ್ ಮಾಡಿಸಿಕೊಳ್ಳಲಾಗಿರುತ್ತದೆ. ಅದೇ ರೀತಿಯಾಗಿ ಬಿಗ್ ಬಾಸ್ ಮನೆಗೆ ಮೊದಲು ಸದಸ್ಯನಾಗಿ ಎಂಟ್ರಿ ಕೊಟ್ಟಿದ್ದ ರವಿ ಬೆಳೆಗೆರೆ ಅವರಿಗೂ ಕೂಡ ಒಂದು ಸಂಭಾವನೆ ಮಾತನಾಡಿ ಸಹಿ ಮಾಡಿಸಿಕೊಳ್ಳಲಾಗಿತ್ತು. 

ರವಿ ಬೆಳೆಗೆರೆ ಅವರಿಗೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಸಂಭಾವನೆಯನ್ನು ಮಾತನಾಡಲಾಗಿತ್ತು. ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ರವಿ ಬೆಳೆಗೆರೆ ಅವರು ಕೇಳುತ್ತಿರುವುದೇ ಬೇರೆ. ತಮಗೆ ಮಾತನಾಡಿದ್ದ ಸಂಭಾವನೆ ಬೇಡ ಎಂದಿದ್ದಾರೆ. ಹೌದು ಒಂದು ವಾರದಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನಾನು ಅಲ್ಲಿ ಕಳೆದಿದ್ದೇನೆ.


ನನಗೆ ಮಕ್ಕಳ ಪ್ರೀತಿ ತಮ್ಮನ ಪ್ರೀತಿ ಅಣ್ಣನ ಪ್ರೀತಿ ಸಿಕ್ಕಿದೆ. ನನಗೆ ಪೂರ್ತಿ ಸಂಭಾವನೆಯೇ ಬೇಡ, ನನಗೆ ಆ ಪ್ರೀತಿ ಸಾಕು. ಆ ಪ್ರೀತಿಗೆ ಬೆಲೆ ಕಟ್ಟಲಾಗದು, ದುಡ್ಡು ಪಡೆದರೆ ನನ್ನ ಮನಸ್ಸು ಒಪ್ಪೋದಿಲ್ಲ ಎಂದಿದ್ದಾರಂತೆ. ಎಲ್ಲರ ಪ್ರೀತಿಯೇ ನನಗೆ ದೊಡ್ಡ ಸಂಭಾವನೆ ಎಂದು ದೊಡ್ಡತನ ತೋರಿಸಿದ್ದಾರೆ. ಬಿಗ್ ಬಾಸ್ ಮುಗಿದ ಕೂಡಲೇ ಎಲ್ಲಾ ಸದಸ್ಯರು ನಮ್ಮ ಮನೆಗೆ ಊಟಕ್ಕೆ ಬನ್ನಿ‌ ಎಂದು ಆಹ್ವಾನ ನೀಡಿ ಹೋಗಿದ್ದಾರೆ.


Find out more: