ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಅನಾಹುತಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರ ಸಂಕಷ್ಟ ಕೇಳದೇ ಮತ್ತೇನನ್ನೋ ಮಾಡಹೊರಟಿದೆ. ಪ್ರಚಾರಕ್ಕೆ ಮೋದಿ ಬರ್ತಾರೆ ಆದ್ರೆ ಜನರ ಸಂಕಷ್ಟಕ್ಕೆ ಬರೋದಿಲ್ಲ ಎಂದು ಫುಲ್ ಗರಂ ಆಗಿದ್ದಾರೆ.ದೊಡ್ಡ ಮಟ್ಟದ ಪ್ರವಾಹಗಳಿಂದ ಕರ್ನಾಟಕದಲ್ಲಿ ಸಂಕಷ್ಟ ಎದುರಾಗಿದೆ. ಪರಸ್ಪರ ಕೆಸರು ಎರೆಚಾಟದಿಂದ ಬೀದಿಯಲ್ಲಿ ಜನ ಪರದಾಡುತ್ತಿದ್ದಾರೆ, ನಾನು ಕೆಲ ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ ಎಂದಿದ್ದಾರೆ. 


ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರು ಚುನವಾಣೆಯಂದು ಕರ್ನಾಟಕಕ್ಕೆ 15ಬಾರಿ ಬಂದರು. ನೆರೆ ಹಾವಳಿಯಲ್ಲಿ ಸಂಪೂರ್ಣ ಆತ್ಮ ಸ್ಥೈರ್ಯ ಕಳೆದುಕೊಂಡ ಜನರಿಗೆ ಧೈರ್ಯ ಹೇಳಲಿಲ್ಲ ಆದರೆ ಮಹಾರಾಷ್ರ್ಟಕ್ಕೆ ಚುನವಾಣೆ ಪ್ರಚಾರಕ್ಕೆ ಹೋಗಿ ನೀರಾವರಿ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಇದುಬಿಜೆಪಿಯವರ ಕೊಡುಗೆ, ನಾಡಿನ ಜನತೆ ಇಗಲಾದಾರು ಅರ್ಥ ಮಾಡಿಕೊಳ್ಲಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ದ ಕುಮಾರಸ್ವಾಮಿ ಸಿಡಿಮಿಡಿಗೊಂಡರು. ಒಂದು ಕಡೆ ಮುಖ್ಯ ಮಂತ್ರಿಗಳು ಹೇಳುತ್ತಾರೆ, ನಾಡಿನಆರ್ಥಿಕ ವ್ಯವಸ್ತೆ ನನಗೆ ಮಾತ್ರ ಗೊತ್ತು ಅಂತಾರೆ ಆದರೆ ವಿಧಾನ ಸಭೆಯಲ್ಲಿ ಆರ್ಥಿಕ ವ್ಯವಸ್ಥೆ ಚನ್ನಾಗಿದೆ ಅಂತಾರೆ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಸಿದರು. 


ಅಲ್ಲದೇ ಸಾಲಮನ್ನಾ ಯೋಜನೆ ಹೆರಸಲ್ಲಿ ರೈತರಿಗೆ ಹಣ ಮೀಸಲು ಇಟ್ಟಿದ್ದೇನೆ. ಅದೇ ಹಣವನ್ನೇ ನೆರೆ ಹಾವಳಿಗೆ ಬಳಸಿಕೊಳ್ಲಿ. ನಾನು ಇದು ವರೆಗೆ ಸರ್ಕಾರದ ಬಗ್ಗೆ ಟೀಕೆ ಮಾಡಿಲ್ಲ, ಮತ್ತೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆ ಬಂದಿದೆ. ಜನಸಾಮಾನ್ಯರು ಎಲ್ಲಿಯವರೆಗೆ ತಾಳ್ಮೆಯಿಂದ ಇರಲು ಸಾಧ್ಯ. ಶಾಶ್ವತ ಪರಿಹಾರ ಕೊಡಬೇಕು. ಸದ್ಯ ನೆರೆ ಪೀಡಿತರು ಮನೆ ಕಳೆದುಕೊಂಡರವರಿಗೆ ಇನ್ನು ಈ ಸರ್ಕಾರ ಮನೆಕೊಟ್ಟಿಲ್ಲ, ತುಮಕೂರಿಗೆ ನೀರು ಹರಿಸಿಲ್ಲ ಅಂತ ಟೀಕೆ ಮಾಡುವ ಮಂತ್ರಿಗಳಿಗೆ ಈಗ ಗೊತ್ತಾಗಿಲ್ಲವಾ. ಗೌಡರ ಬಗ್ಗೆ ಮಾತನಾಡುತ್ತಿದ್ದವರು ಈಗ ಯಾಕೇ ಮಾತನಾಡುತ್ತಿಲ್ಲ, ಮೊದಲು ಚಿಲ್ಲರೆ ರಾಜಕಾರಣ ಬಿಡಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ದ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.


Find out more: