ಬೆಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರಿಗೆ ಬುಧವಾರ ಶರತ್ತು ಬದ್ಧ ಜಾಮೀನು ನೀಡಿದೆ. ಆದ್ದರಿಂದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನ್ಯಾಯಕ್ಕೆ ಸಂದ ಜಯವೆಂದು ಟ್ವೀಟ್ ಮಾಡಿದ್ದರು. ಇದರಿಂದ ಶೆಟ್ಟರ್ ಅವರು ಸಿದ್ದರಾಮಯ್ಯ ಅವರಿಗೆ ಶುರುವಾಯ್ತು ಸಂಕಟ ಎನ್ನುವ ಪ್ರಶ್ನೆ ಹುಟ್ಟುಹಾಕುವ ಹಾಗೆ ಅವರ ಟ್ವೀಟ್ ಮಾಡಿದೆ. 


ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿದ ಬಳಿಕ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿ, ನ್ಯಾಯಕ್ಕೆ ದೊರೆತ ಜಯ ಎಂದಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರ ಕನಸಿಗೆ ತಣ್ಣೀರೆರಚಿದಂತಾಗಿದೆ. ನಿಮ್ಮ ಒಳಗಿನ ಸಂಕಟ ಅರ್ಥವಾಗುತ್ತದೆ  ಬಹುಶ: ಸಿದ್ದರಾಮಯ್ಯ  ನವರು ಊಹಿಸಲಾರದಂತಹ ತೀರ್ಪು ಬುಧವಾರ ದೆಹಲಿ ಹೈ ಕೋರ್ಟ್ ನೀಡಿದೆ  ಎಂದು ಬರೆದುಕೊಂಡಿದ್ದಾರೆ. 


ಸ್ವಪಕ್ಷೀಯ ವಿರೋಧಿಗಳು ದೂರಾದರು ಎಂಬ ಕಾರಣದಿಂದ ಹೊಸ ಹುಮ್ಮಸ್ಸು ಹಾಗೂ ಧೈರ್ಯದಿಂದ ಉಪ ಚುನಾವಣೆಗೆ ಸಿದ್ದರಾಗುತ್ತಿದ್ದ ಸಿದ್ದರಾಮಯ್ಯ ನವರ ಕನಸಿಗೆ ತಣ್ಣೀರನ್ನು ದೆಹಲಿ ಹೈಕೋರ್ಟ್ ಎರಚಿದೆ ಎಂದು ಟ್ವೀಟಿಸಿದ್ದಾರೆ. 
ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನಗೆ ಸಂತೋಷ ಉಂಟುಮಾಡಿದೆ. ದ್ವೇಷ ರಾಜಕಾರಣದ ಉದ್ದೇಶದಿಂದ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಅವರನ್ನು ಬಂಧಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಲಾಗಿತ್ತು. ಅವರಿಗೆ ಜಾಮೀನು ದೊರೆತಿರುವುದು ನ್ಯಾಯಕ್ಕೆ ದೊರೆತ ಜಯ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.


ಡಿಕೆಶಿ ಜಾಮೀನು ಆದೇಶ ಪ್ರಶ್ನಿಸಿ  ಇಡಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ದೆಹಲಿ ಹೈಕೋರ್ಟ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡಿದೆ. ಈಗ ಜಾರಿ ನಿರ್ದೇಶನಾಲಯ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ದೆಹಲಿ ಹೈಕೋರ್ಟಿನ. ಡಿ.ಕೆ.ಶಿವಕುಮಾರ್ ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು, ಪಾಸ್ ಪೋರ್ಟ್ ಒಪ್ಪಿಸಬೇಕು ಎಂಬುದಾಗಿ ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.




Find out more: